March 11, 2026
Wednesday, March 11, 2026
spot_img

ʼಸುಹಾನಾ ಸೈಯದ್‌ʼ ಹೆಸರು ಬದಲಿಸಿಕೊಳ್ಳಿ ಎಂದ ನೆಟ್ಟಿಗನಿಗೆ ಮುಖಕ್ಕೆ ಹೊಡೆದಂಥ ರಿಪ್ಲೇ ಕೊಟ್ಟ ಗಾಯಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗಾಯಕಿ ಸುಹಾನಾ ಸೈಯದ್‌ ಹಿಂದು ಯುವಕನನ್ನು ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾಗಿ ಇತ್ತೀಚೆಗೆ ಮತ್ತೆ ಸುದ್ದಿಗೆ ಬಂದಿದ್ದರು. ಈಗಲೂ ಪತಿ ಜತೆ ದೇವಾಲಯಗಳಿಗೆ ಹೋಗುವ ಫೋಟೊಗಳನ್ನು ಸುಹಾನಾ ಪೋಸ್ಟ್‌ ಮಾಡುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್‌ ಆಗಿರುವ ಸುಹಾನಾ ಸೈಯದ್‌ ಪ್ರಶ್ನೆ ಉತ್ತರ ಎನ್ನುವ ಇನ್ಸ್ಟಾಗ್ರಾಮ್‌ ಸೆಷನ್‌ ಹೋಸ್ಟ್‌ ಮಾಡಿದ್ದಾರೆ. ಇದರಲ್ಲಿ ಅಭಿಮಾನಿಗಳು ಏನಾದರೂ ಕೇಳಬಹುದು, ಉತ್ತರ ಕೊಡುವಂಥ ಪ್ರಶ್ನೆಯಾಗಿದ್ದರೆ ಸೆಲೆಬ್ರಿಟಿಗಳು ಉತ್ತರ ನೀಡುತ್ತಾರೆ.


ಈ ಪ್ರಶ್ನೋತ್ತರದ ವೇಳೆ ವ್ಯಕ್ತಿಯೊಬ್ಬ ನೀವ್ಯಾಕೆ ನಿಮ್ಮ ಹೆಸರನ್ನು ಸೈಯದ್‌ ಬದಲು ಸವದತ್ತಿ ಯೆಲ್ಲಮ್ಮ ಎಂದು ಇಟ್ಟುಕೊಳ್ಳಬಾರದು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸುಹಾನಾ ಖಡಕ್‌ ಉತ್ತರ ನೀಡಿದ್ದಾರೆ. ಇಂಥ ಪ್ರಶ್ನೆಗಳನ್ನು ಬಾಯಿಬಿಟ್ಟು ಕೇಳುತ್ತೀರಿ ಎಂದರೆ ನಂಬೋಕಾಗೋದಿಲ್ಲ. ಇದಕ್ಕೆ ಹೇಳೋದು ವಿದ್ಯೆ ಮುಖ್ಯ ಎಂದು ಹೇಳಿದ್ದಾರೆ.

ನೀವು ಹೀಗೆ ಮಾತನಾಡಿ ಒಂದು ಧರ್ಮಯನ್ನು ಗೌರವಿಸುತ್ತಿದ್ದೀನಿ ಅಂತ ಅಂದುಕೊಂಡಿದ್ದೀರಾ. ನಾನು ಕೂಡ ಸಹಾನುಭೂತಿ ಇರುವ ಧರ್ಮವನ್ನು ಗೌರವಿಸಿಕೊಂಡು ಬಂದಿದ್ದೀನಿ. ಅದಕ್ಕೆ ವಿದ್ಯಾಭ್ಯಾಸ ಬಹಳ ಮುಖ್ಯ ಅನ್ನೋದು. ಒಳ್ಳೆ ಶಾಲೆ ಸೇರಿ, ಒಳ್ಳೆ ಬುದ್ಧಿ ಕಲೀರಿ. ನಿಮ್ಮ ಧರ್ಮವನ್ನು ಗೌರವಿಸಿ, ಇನ್ನೊಬ್ಬರ ಧರ್ಮವನ್ನು ಅಗೌರವಿಸುವುದು ಸರಿಯಲ್ಲ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !