ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಖ್ಯಾತ ಗಾಯಕ ರಾಹತ್ ಫತೇಹ್ ಅಲಿ ಖಾನ್ ಅವರನ್ನು ದುಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೈನಲ್ಲಿ ಇವರನ್ನು ಬಂಧಿಸಲಾಗಿದೆ. ರಾಹತ್ ಫತೇಹ್ ಅಲಿ ಖಾನ್ ಅವರ ಮಾಜಿ ಮ್ಯಾನೇಜರ್ ಸಲ್ಮಾನ್ ಅಹ್ಮದ್ ಅವರು ನೀಡಿದ ಮಾನಹಾನಿ ದೂರಿನ ಮೇರೆಗೆ ಗಾಯಕನನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಜಿಯೋ ನ್ಯೂಸ್ ವರದಿ ಮಾಡಿದೆ.
ಗಾಯಕ ಸೋಮವಾರ ಸಂಗೀತ ಸಹಯೋಗ ಕಾರ್ಯಕ್ರಮಕ್ಕಾಗಿ ಲಾಹೋರ್‌ನಿಂದ ದುಬೈಗೆ ಆಗಮಿಸಿದ್ದರು. ಬಂಧನದ ಬಳಿಕ ಗಾಯಕನನ್ನು ಬುರ್ಜ್ ದುಬೈ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಮಾಧ್ಯಮಗಳು ವರದಿ ಮಾಡಿವೆ.