ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಖ್ಯಾತ ಸಿಂಗರ್ ಉಷಾ ಉತ್ತುಪ್ ಅವರ ಪತಿ ಜಾನಿ ಚಾಕೊ ಉತ್ತುಪ್ ತೀವ್ರ ಹೃದಯಾಘಾತದಿಂದ
ನಿಧನರಾಗಿದ್ದಾರೆ.
78 ವರ್ಷ ವಯಸ್ಸಿನ ಜಾನಿ ತಮ್ಮ ನಿವಾಸದಲ್ಲಿ ಟಿವಿ ನೋಡುವಾಗ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕೊನೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಜಾನಿ ಚಾಕೊ ಉತ್ತುಪ್ ಅವರು ಉಷಾರವರ 2ನೇ ಪತಿ. ಅದಕ್ಕೂ ಮುನ್ನ ರಾಮು ಅವರನ್ನು ಉಷಾ ಮದುವೆಯಾಗಿದ್ದರು. 70ರ ದಶಕದಲ್ಲಿ ಟೀ ಪ್ಲಾನ್ಟೇಶನ್ನಲ್ಲಿ ಜಾನಿ ಚಾಕೊ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರನ್ನು ಉಷಾ ಉತ್ತುಪ್ ಭೇಟಿಯಾದರು. ಬಳಿಕ ಈ ಜೋಡಿ ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.