ಭಾರತೀಯ ನೌಕಾ ಪಡೆಯ ಸಬ್ ಲೆಫ್ಟಿಂನೆಂಟ್ ಆಗಿ ಮಂಗಳೂರಿನ ಅನನ್ಯ ರಾವ್ ನೇಮಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರಿನ ಲ್ಯಾಂಡ್ ಲಿಂಕ್ಸ್ ನಲ್ಲಿ ನೆಲೆಸಿರುವ ಕುಮಾರಿ ಅನನ್ಯ ಮೇ 31ರಂದು Indian Naval Academy Ezhimala ದಲ್ಲಿ ನಡೆದ ಪಾಸಿಂಗ್ ಔಟ್ ಪೆರೇಡ್ ನಲ್ಲಿ ಕಮೀಷನ್ಡ್ ಅಧಿಕಾರಿ ಆಗಿ ಹೊರಹೊಮ್ಮಿದ್ದಾರೆ.

ನಿವೃತ್ತ ಟೆಲಿಕಾಂ ಉದ್ಯೋಗಿ ಶ್ರೀ ಸತೀಶ್ ರಾವ್ ಮತ್ತು ವೀಣಾ ದಂಪತಿಗಳ ಪುತ್ರಿ ಕುಮಾರಿ ಅನನ್ಯಾ ರಾವ್ LKg ಇಂದ SSLC ವರೆಗೆ BGS ಕಾವೂರ್ ನಲ್ಲಿ ವಿದ್ಯಾಭ್ಯಾಸ, PUC ಚೈತನ್ಯ ಕಾಲೇಜ್, B Tech ಪದವಿಯನ್ನು ಸುರತ್ಕಲ್ಲಿನ NITK ಯಿಂದ ಮೆಕಾನಿಕಲ್ ವಿಭಾಗದಲ್ಲಿ ಅಧ್ಯಯನ ಮಾಡಿರುತ್ತಾರೆ. ಬಾಲ್ಯದಿಂದ ದೇಶ ಸೇವೆಯಲ್ಲಿ ಅಭಿರುಚಿ ಇದ್ದು ಭಾರತೀಯ ಸೈನ್ಯ ಸೇರಬೇಕೆಂಬ ಹಂಬಲ ಅದಕ್ಕಾಗಿ ಕಾಲೇಜ್ ನಲ್ಲಿ NCC ತರಬೇತಿ ಹೊಂದಿದ್ದಳು. NITK ಸುರತ್ಕಲ್ ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಸೇನಾ ನೇಮಕಾತಿ ಪರೀಕ್ಷೆಯ ಮೂಲಕ ಆಯ್ಕೆಗೊಂಡು 10 ತಿಂಗಳ ತರಬೇತಿ ಪಡೆದು ಇತ್ತೀಚೆಗೆ ಸಬ್ ಲೆಫ್ಟಿಂನೆಂಟ್ ಆಗಿ ಆಯ್ಕೆಗೊಂಡಿದ್ದಾರೆ.

ಕುಮಾರಿ ಅನನ್ಯ ಅವರ ತಂದೆ ಶ್ರೀ ಸತೀಶ್ ರಾವ್ ಅವರು ದಿವ್ಯಾಂಗರ ಸಬಲೀಕರಣಕ್ಕೆ ಕೆಲಸ ಮಾಡುತ್ತಿರುವ ರಾಷ್ಟ್ರೀಯ ಸಂಘಟನೆ ಸಕ್ಷಮ ದ ಜಿಲ್ಲಾ ಖಜಾಂಜಿ ಆಗಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!