ಹೊಸದಿಗಂತ ವರದಿ, ಹಾಸನ / ಆಲೂರು:
ಬೆಳ್ಳಂಬೆಳಗ್ಗೆ 6 ಗಂಟೆ ಸಮಯದಲ್ಲಿ ರಸ್ತೆಯಲ್ಲಿ ಓಡಾಡಿದ ಒಂಟಿ ಕಾಡಾನೆ ಕಂಡು ಗ್ರಾಮಸ್ಥರು ಭಯ ಭೀತರಾದ ಘಟನೆ ತಾಲೂಕಿನ ಹೆಮ್ಮಿಗೆ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಹೆಮ್ಮಿಗೆ ಗ್ರಾಮದ ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಜೀವನ್ ಅವರ ಮನೆಯ ಮುಂದೆ ಹೋಗಿದ್ದು ಹಲವರು ನೋಡಿದ್ದು ಇದು ಭೀಮ ಹೆಸರಿನ ಕಾಡಾನೆ ಎಂದು ಗುರುತಿಸಿದ್ದಾರೆ ರಾತ್ರಿ ಗ್ರಾಮದಲ್ಲಿಯೇ ನಿಲುಗಡೆಯಾಗಿದ್ದ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ಮತ್ತು ನಿರ್ವಾಹಕ ಕೂದಲೆಳೆ ಅಂತರದಲ್ಲಿ ಆನೆ ದಾಳಿಯಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳ ಚಲನವಲನಗಳನ್ನು ಗಮನಿಸುತ್ತಿದ್ದು ಜನರಿಗೆ ಮಾಹಿತಿ ನೀಡುತ್ತಿದ್ದಾರೆ ಜನರು ಜಮೀನು ಹಾಗೂ ಇತರೆ ಕಡೆಗಳಲ್ಲಿ ಹೋಗುವವರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಜೀವನ್ ಹೆಮ್ಮಿಗೆ ಗ್ರಾಮದ ಸುತ್ತಮುತ್ತ ಕಳೆದ ಒಂದು ವಾರದಿಂದ ಕ್ಕೂ ರಸ್ತೆಯಲ್ಲಿ ಸಂಚರಿಸಿದ ಒಂಟಿ ಸಲಗದಿಂದ ರೈತರು
ಆತಂಕದಿಂದ ತೋಟದ ಕೆಲಸಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಹಾಗೂ ಈ ಭಾಗದ ವಿವಿಧ ಗ್ರಾಮದ ಸುತ್ತ ಮುತ್ತ ಕಾಫಿ, ಅಡಿಕೆ ಮತ್ತು ಬತ್ತದ ಗದ್ದೆ ಹಾಗೂ ಇತರೆ ಬೆಳೆಗಳನ್ನು ನಾಶ ಮಾಡುತ್ತಿರುವ ಕಾಡಾನೆಗಳ ಹಿಂಡು ರೈತರಿಗೆ ಅಪಾರ ನಷ್ಟವನ್ನುಂಟು ಮಾಡುತ್ತಿದೆ. ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರದ ಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹೆಮ್ಮಿಗೆ ಜೀವನ್ ಒತ್ತಾಯಿಸಿದರು.
ಇಲ್ಲಿವೇ ಆನೆಗಳು? ಎಚ್ಚರಿಕೆಯಿಂದಿರಿ..!
ಸಕಲೇಶಪುರ ತಾಲ್ಲೂಕಿನ ವಡೂರು ಹಾಗು ಕಿರುಹುಣಸೆ ಕಲ್ಲಾರೆ ಫಾರೆಸ್ಟ್ ಸುತ್ತಮುತ್ತ, ಹೆತ್ತೂರು – ಯಸಳೂರು ಹೋಬಳಿಯ ಮರ್ಕಳ್ಳಿ, ಕಿರ್ಕಳ್ಳಿ, ಮಠಗೂರು, ಹಾಗು ಹಳ್ಳಿಯೂರು ಗ್ರಾಮದ ಸುತ್ತಮುತ್ತ ಕಾಡಾನೆಗಳು ಕಂಡುಬಂದಿರುತ್ತವೆ.
ಆಲೂರು ತಾಲ್ಲೂಕಿನಲ್ಲಿ ದೇವರಪುರ ಗ್ರಾಮದ ಕಳವ ಬೆಟ್ಟ, ಬಲ್ಲೂರು, ಬೆಟ್ಟಳ್ಳಿ ಹಾಗು ನಲ್ಲೂರು ಗ್ರಾಮದ ಸಾರ ಎಸ್ಟೇಟ್ ಸುತ್ತಮುತ್ತ ಕಾಡಾನೆಗಳ ಗುಂಪು ಕಂಡು ಬಂದಿರುತ್ತವೆ.
ಬೇಲೂರು ತಾಲೂಕಿನಲ್ಲಿ ಪಂಚಾಗೌರಿ ಎಸ್ಟೇಟ್ ಬಂದಿ ಹಳ್ಳಿ ಹತ್ತಿರ ಕಾಡಾನೆಗಳು ಕಂಡು ಬಂದಿವೆ ಸಾರ್ವಜನಿಕರು ಕಾಡಾನೆಗಳಿಂದ ಎಚ್ಚರಿಕೆಯಿಂದ ಇರಬೇಕೆಂದು ಅರಣ್ಯ ಇಲಾಖೆ ಮಾಹಿತಿ ರವಾನಿಸಿದೆ.