‘ಸಿಂದೂರ’ ಪ್ರತೀಕಾರಕ್ಕೆ ಬೆಚ್ಚಿಬಿದ್ದ ಪಾಪಿ ಪಾಕಿಸ್ತಾನ: ತುರ್ತು ಸಭೆ ಕರೆದ ಪ್ರಧಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ‘ಆಪರೇಷನ್ ಸಿಂದೂರ’ ದಾಳಿಗೆ ಬೆಚ್ಚಿಬಿದ್ದಿರುವ ಪಾಕಿಸ್ತಾನ ಈಗ ಅಣ್ವಸ್ತ್ರ ಬಳಕೆಯ ಬಗ್ಗೆ ನಿರ್ಧಾರ ಕೈಗೊಳ್ಳುವ National Command Authority ತುರ್ತು ಸಭೆಗೆ ಪ್ರಧಾನಿ ಶೆಹಬಾಜ್ ಷರೀಫ್ ಕರೆ ನೀಡಿದ್ದಾರೆ.

ಇದು ದೇಶದ ಪರಮಾಣು ಶಸ್ತ್ರಾಸ್ತ್ರಗಳ ನಿಯಂತ್ರಣ ಮತ್ತು ಕಾರ್ಯಾಚರಣೆಯ ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಸ್ಥೆಯಾಗಿದೆ.

ಭಾರತ ಮತ್ತು ಪಾಕಿಸ್ತಾನ ಎರಡೂ ಪರಮಾಣು ಬಾಂಬ್‌ ಹೊಂದಿದೆ. ಭಾರತ ತಾನೂ ಯಾವತ್ತೂ ಮೊದಲು ಪರಮಾಣು ಅಸ್ತ್ರವನ್ನು ಪ್ರಯೋಗಿಸುವುದಿಲ್ಲ ಎಂದು ವಿಶ್ವಕ್ಕೆ ಸ್ಪಷ್ಟನೆ ನೀಡಿದೆ. ಆದರೆ ತನ್ನ ಮೇಲೆ ಯಾರಾದರೂ ಪ್ರಯೋಗ ಮಾಡಿದರೆ ನಾವು ಪ್ರಯೋಗಿಸುತ್ತೇನೆ ಎಂದು ಈ ಹಿಂದೆಯೇ ತಿಳಿಸಿದೆ.

ಒಂದು ವೇಳೆ ಯಾವುದಾದರೂ ದೇಶ ಪರಮಾಣು ಬಾಂಬ್‌ ಬಳಸಿದರೆ ಆ ದೇಶದ ಜೊತೆ ವಿಶ್ವವೇ ಆರ್ಥಿಕ ಸಂಬಂಧವನ್ನೇ ಕಳೆದುಕೊಳ್ಳುತ್ತದೆ. ಹೀಗಾಗಿ ಎರಡನೇ ಮಹಾಯುದ್ಧದ ಬಳಿಕ ಯಾವುದೇ ದೇಶ ಪರಮಾಣು ಅಸ್ತ್ರವನ್ನು ಬಳಸಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!