September 28, 2026
Monday, September 28, 2026
spot_img

SIR ಗೊಂದಲ: ಅಧಿಕಾರಿಗಳ ತಪ್ಪಿಗೆ ನಾವ್ಯಾಕೆ ಶಿಕ್ಷೆ ಅನುಭವಿಸಬೇಕು?

ಹೊಸದಿಗಂತ ಡಿಜಿಟಲ್ ಡೆಸ್ಕ್:

SIR ಪ್ರಕ್ರಿಯೆ ರಾಜ್ಯಾದ್ಯಂತ ಭರದಿಂದ ಸಾಗುತ್ತಿದ್ದು, ಈ ನಡುವೆ ಜಿಗಣಿ ಸಮೀಪದ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ SIR ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರಣ ನೀವೇ ನೋಡಿ..

ಗ್ರಾಮಸ್ಥರ ಪ್ರಕಾರ SIR ಪ್ರಕ್ರಿಯೆ ಪೂರ್ಣಗೊಳಿಸೋಕೇ ಬೇಕಾಗಿರುವ ದಾಖಲೆ ನೀಡಿದ್ದರೂ ‘ನಿಮ್ಮ ವೋಟರ್ ಐಡಿ ರದ್ದಾಗಿದೆ’ ಎಂಬ ನೋಟಿಸ್ ಬರುತ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಸರಿಯಾದ ಆಧಾರ್, ಐಡಿ ಕೊಟ್ಟರೂ ದಾಖಲೆ ಸರಿ ಇಲ್ಲ ಎಂದು ನೋಟಿಸ್ ಬರುತ್ತಿದೆ. ಈ ದಾಖಲೆ ಸರಿ ಪಡಿಸೋಕೆ ಮಾರ್ಕ್ಸ್‌ಕಾರ್ಡ್, ಜನ್ಮ ಪ್ರಮಾಣಪತ್ರ ತರುವಂತೆ ಅಧಿಕಾರಿಗಳು ಹೇಳಿದ್ದರಂತೆ. 71 ವರ್ಷದ ಹಿರಿಯರಿಗೂ ಮಾರ್ಕ್ಸ್‌ಕಾರ್ಡ್ ತರುವಂತೆ ಹೇಳಿರೋದು ಈಗ ಆಕ್ರೋಶಕ್ಕೆ ಕಾರಣವಾಗಿದೆ.

ಮತ್ತೊಬ್ಬರ ಪಾಡು ಬೇರೇನೇ ಇದೆ. ಇಲ್ಲೊಬ್ಬ ವ್ಯಕ್ತಿ ಕರ್ನಾಟಕದಲ್ಲೇ ಹುಟ್ಟಿ ಬೆಳೆದಿದ್ದು ಅವರ ವಿಳಾಸ ತಮಿಳುನಾಡಿಗೆ ಬದಲಾಗಿದೆ, ತಮಿಳುನಾಡಿನ ವಿಳಾಸ ಕ್ಯಾನ್ಸಲ್ ಮಾಡಿ ಅಂತ ಅಧಿಕಾರಿಗಳು ಹೇಳಿದ್ದಾರೆ. ನಾವು ಎಲ್ಲಿ ಅಂತ ಹೋಗುವುದು, ಈ ಸಮಸ್ಯೆಗೆ ಪರಿಹಾರ ಕೊಡಿ ಅಂತ ಆ ವ್ಯಕ್ತಿ ಅಳಲು ತೋಡಿಕೊಂಡಿದ್ದಾರೆ.

ಒಟ್ಟಾರೆ ಅಧಿಕಾರಿಗಳ ಎಡವಟ್ಟಿಗೆ ಈಗ ಸಾರ್ವಜನಿಕರು ತಲೆ ಕೆಡಿಸಿಕೊಂಡು ಕಚೇರಿಗಳಿಗೆ ಅಲೆದಾಡುವಂತಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇನ್ನು ಎಷ್ಟು ಸಮಯ ಬೇಕೋ ಏನೋ..

Must Read