ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah)ಅವರು ಮಾಂಸ ಸೇವಿಸಿ (Non veg) ಸುತ್ತೂರು ಮಠಕ್ಕೆ ( suttur Mutt)ಭೇಟಿ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇನ್ನು ಈ ಬಗ್ಗೆ ಮಾಧ್ಯಮಗಳು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದು, ಇಂತಹ ಸಿಲ್ಲಿ ಪ್ರಶ್ನೆಗಳನ್ನು ಕೇಳಬೇಡಿ. ಊಟ, ತಿಂಡಿ ತಿನ್ನೋದು, ಬಟ್ಟೆ ಹಾಕುವುದರ ಬಗ್ಗೆ ಮಾತಾಡಕ್ಕಾಗುತ್ತಾ? ಬಡವರ ಸಮಸ್ಯೆ ಹಾಗೂ ನಿರುದ್ಯೋಗ ಇದೆಲ್ಲ ಮಾತಾಡೋಣ. ಅದನ್ನು ಬಿಟ್ಟು ಮಾಂಸ ಸೇವಿಸಿ ಮಠಕ್ಕೆ ಭೇಟಿ ಹೀಗೆಲ್ಲಾ ಕೇಳಬೇಡಿ ಎಂದು ಗರಂ ಆದರು.
ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಚಲೋ ದಿಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂರ ಕಾಂಗ್ರೆಸ್ ನಾಯಕರೊಂದಿಗೆ ಭರ್ಜರಿ ಬಾಡೂಟ ಸೇವಿಸಿ, ಅಲ್ಲಿಂದ ಸೀದಾ ಸುತ್ತೂರು ಮಠದ ಜಾತ್ರಾ ಮಹೋತ್ಸವಕ್ಕೆ ಮಠಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah)ಅವರು ತೆರಳಿದ್ದರು ಎಂದು ಮಾತುಗಳು ಕೇಳಿಬರುತ್ತಿದೆ.
ಈ ಕುರಿತು ಮಾಧ್ಯಮಗಳುಸಿಎಂ ಸಿದ್ದರಾಮಯ್ಯ ಅವರಿಗೆ ಮಾಂಸಾಹಾರ ಸೇವಿಸಿ ಸುತ್ತೂರು ಮಠಕ್ಕೆ ಹೋಗಿದ್ದೀರಿ ಎಂಬ ಆರೋಪ ಕೇಳಿಬಂದಿದೆ ಎಂದು ಕೇಳಿದ್ದಕ್ಕೆ, ಡೋಂಟ್ ಆಸ್ಕ್ ಸಿಲ್ಲಿ ಕ್ವೆಶ್ಚನ್ಸ್ (ನೀವು ಸಣ್ಣ ಪ್ರಶ್ನೆಗಳನ್ನು ಕೇಳಬೇಡಿ) ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಚಿವ ಸಂಪುಟ ಸಭೆಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುತ್ತೂರು ಮಠಕ್ಕೆ ಮಾಂಸ ತಿಂದು ಹೋದ ವಿಚಾರವನ್ನು ಕೇಳಿದರೆ, ಡೋಂಟ್ ಆಸ್ಕ್ ಸಿಲ್ಲಿ ಕ್ವಶ್ಚನ್ಸ್ ಎಂದರು. ಮುಂದುವರೆದು, ಊಟ ಮಾಡೋದು, ತಿಂಡಿ ತಿನ್ನೋದು, ಬಟ್ಟೆ ಹಾಕೋದು ಅದರ ಬಗ್ಗೆಯೆಲ್ಲ ಮಾತಾಡಕ್ಕಾಗುತ್ತಾ? ಬಡವರ ಸಮಸ್ಯೆ ನಿರುದ್ಯೋಗ ಇದೆಲ್ಲ ಮಾತಾಡೋಣ. ಅದನ್ನು ಬಿಟ್ಟು ಇಂಥ ಸಿಲ್ಲಿ ಕ್ವಶ್ಚನ್ಸ್ ಕೇಳಬೇಡಿ ಎಂದು ಮಾಧ್ಯಮದವರ ವಿರುದ್ಧ ಕಿಡಿಕಾರಿದರು.
ಸಿದ್ದರಾಮಯ್ಯ ನಡೆ ಖಂಡಿಸಿದ ವಿಜಯೇಂದ್ರ
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಇದು ಬಹಳ ದುರದೃಷ್ಟಕರ. ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಗಳು ಎಂಬುದನ್ನು ಎಲ್ಲೋ ಒಂದು ಕಡೆ ಮರೆಯುತ್ತಿದ್ದಾರೆ ಎಂಬುದು ನನ್ನ ಭಾವನೆ. ಇದು ಮೊದಲ ಬಾರಿ ಏನಲ್ಲ. ಹಲವು ಸಂದರ್ಭಗಳಲ್ಲಿ ಈ ರೀತಿ ಘಟನೆಗಳು ಪುನರಾವರ್ತನೆ ಆಗಿವೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ದೇವರ ಬಗ್ಗೆ ಎಷ್ಟು ಭಕ್ತಿ ಭಾವನೆ ಇಟ್ಟುಕೊಂಡಿದ್ದಾರೆ ಎಂಬುದು ಬೇರೆ ಮಾತು. ಆದರೆ, ರಾಜ್ಯದ ಮುಖ್ಯಮಂತ್ರಿಯಾಗಿ ಅವರ ನಡವಳಿಕೆಯನ್ನು ಸಮಾಜ, ಪ್ರತಿಯೊಬ್ಬರೂ ಗಮನಿಸುತ್ತಾರೆ. ಈ ಘಟನೆ ನಿಜವಾಗಿಯೂ ಖಂಡನೀಯ. ಅದರಲ್ಲೂ ಸುತ್ತೂರಿನ ಪವಿತ್ರ ಗದ್ದುಗೆಗೆ ಭೇಟಿ ಕೊಟ್ಟದ್ದು ನಿಜವಾಗಲೂ ಒಂದು ದುರಂತ ಎಂದರು.