ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದ ಜಿರಿಬಾಮ್ನಲ್ಲಿ ಸಿಆರ್ಪಿಎಫ್, ಪೊಲೀಸ್ ಪಡೆಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಓರ್ವ ಯೋಧ ಮೃತಪಟ್ಟಿದ್ದು, ಮೂವರು ಪೊಲೀಸರು ಗಾಯಗೊಂಡಿದ್ದಾರೆ.
20 ಬೆಟಾಲಿಯನ್ ಸಿಆರ್ಪಿಎಫ್ ಮತ್ತು ಜಿರಿಬಾಮ್ ಜಿಲ್ಲಾ ಪೊಲೀಸರ ಜಂಟಿ ತಂಡವು ಒಟ್ಟಾಗಿ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಇದೇ ವೇಳೆ ಜಂಟಿ ತಂಡದ ಮೇಲೆ ದುಷ್ಕರ್ಮಿಗಳು ಹೊಂಚು ದಾಳಿ ನಡೆಸಿದ್ದರು.ದಾಳಿಯ ವೇಳೆ ಮೂವರು ಪೊಲೀಸರು ಗಾಯಗೊಂಡಿದ್ದು, ಯೋಧರೊಬ್ಬರು ಸಾವನ್ನಪ್ಪಿದ್ದಾರೆ.
ಪೊಲೀಸ್ ವರದಿ ಪ್ರಕಾರ, ಜುಲೈ 13ರಂದು ನಡೆದ ಗುಂಡಿನ ದಾಳಿಗೆ ಸಬಂಧಿಸಿದಂತೆ ಶೋಧ ಕಾರ್ಯಾಚರಣೆ ನಡೆಸಲು ಜಂಟಿ ಭದ್ರತಾ ತಂಡವು ಜಿರಿಬಾಮ್ ಜಿಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಮೊನಬಂಗ್ ಗ್ರಾಮದ ಬಳಿ ಹೋಗುತ್ತಿತ್ತು.
ದಾಳಿಯಲ್ಲಿ ಮೃತಪಟ್ಟ ಯೋಧ ಸಿಆರ್ಪಿಎಫ್ನ ಭಾಗವಾಗಿದ್ದರು. ಅವರನ್ನು ಬಿಹಾರದ ನಿವಾಸಿ ಅಜಯ್ ಕುಮಾರ್ ಝಾ ಎಂದು ಗುರುತಿಸಲಾಗಿದೆ.