ಕೇಜ್ರಿವಾಲ್ ಜನ್ಮದಿನವಾದ ಇಂದು ಪಾದಯಾತ್ರೆ ಆರಂಭಿಸಲಿರುವ ಸಿಸೋಡಿಯಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಜೈಲು ಪಾಲಾದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜನ್ಮದಿನವಾದ ಇಂದು ರಾಜಧಾನಿಯಲ್ಲಿ ತಮ್ಮ ‘ಪಾದಯಾತ್ರೆ’ ಪ್ರಾರಂಭಿಸಲಿದ್ದಾರೆ.

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕಳೆದ ವಾರ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದ ಮನೀಶ್ ಸಿಸೋಡಿಯಾ ಅವರು ಗ್ರೇಟರ್ ಕೈಲಾಶ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಲ್ಕಾಜಿಯಲ್ಲಿರುವ ಡಿಡಿಎ ಫ್ಲಾಟ್‌ನಿಂದ ಸಂಜೆ 5 ಗಂಟೆಗೆ ಮೆರವಣಿಗೆಯನ್ನು ಪ್ರಾರಂಭಿಸಲಿದ್ದಾರೆ.

ಫೆಬ್ರವರಿ 2025 ರಲ್ಲಿ ನಡೆಯಲಿರುವ ಮುಂದಿನ ವರ್ಷದ ದೆಹಲಿ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಆಮ್ ಆದ್ಮಿ ಪಕ್ಷ (ಎಎಪಿ) ಯೋಜಿಸಿರುವ ಔಟ್‌ರೀಚ್ ಕಾರ್ಯಕ್ರಮಗಳ ಸರಣಿಯ ಭಾಗವಾಗಿ ಈ ಪಾದಯಾತ್ರೆ ನಡೆಯುತ್ತಿದೆ.

ಈ ಹಿಂದೆ ಆಗಸ್ಟ್ 14 ರಂದು ಕಾಲ್ನಡಿಗೆ ಜಾಥಾವನ್ನು ಪ್ರಾರಂಭಿಸಲು ನಿರ್ಧರಿಸಲಾಗಿತ್ತು ಆದರೆ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿಯಾಗಿ ಭದ್ರತಾ ಸಮಸ್ಯೆಗಳಿಂದಾಗಿ ಮುಂದೂಡಲಾಯಿತು.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!