ಹೊಸದಿಗಂತ ಮಂಗಳೂರು:
ಉಡುಪಿ ಜಿಲ್ಲೆಯ ಸಾಲಿಗ್ರಾಮದ ಕಯಾಕಿಂಗ್ ಪಾಯಿಂಟ್ ಮತ್ತೆ ಎಲ್ಲರ ಗಮನ ಸೆಳೆದಿದೆ. ಇಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ವಿಶೇಷ ರೀತಿಯಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ ಇಲ್ಲಿ ನಡೆದಿದೆ.
ಪ್ರವಾಸಿ ಬೋಟ್‌ಗಳನ್ನು ವಿನೂತನ ರೀತಿಯಲ್ಲಿ ಸಿದ್ಧಗೊಳಿಸಿ, ಸೀತಾನದಿಯಲ್ಲಿ ಕಯಾಕಿಂಗ್ ಮೂಲಕ ತೆರಳಿ ಇಲ್ಲಿನ ಕಾಂಡ್ಲಾವನದ ನಡುವೆ ‘75’ ಮಾದರಿಯಲ್ಲಿ ಬೋಟ್‌ಗಳನ್ನು ನಿಲ್ಲಿಸಿ ಜಾಗೃತಿ ಮೂಡಿಸಲಾಗಿದೆ.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಕುಂದಾಪುರ ಸಹಾಯಕ ಆಯುಕ್ತೆ ರಶ್ಮೀ ಎಸ್. ಆರ್., ಉಡುಪಿ ಎಡಿಸಿ ಮಮತಾದೇವಿ ಮೊದಲಾದವರು ಈ ಜಾಗೃತಿ ಕಾರ್ಯದಲ್ಲಿ ಸಾಥ್ ನೀಡಿದ್ದಾರೆ.
ಈ ಸುಂದರ ದೃಶ್ಯಾವಳಿಗಳನ್ನು ಹಂಚಿಕೊಳ್ಳಲಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಂದಹಾಗೆ ಈ ಕಯಾಕಿಂಗ್ ಪಾಯಿಂಟ್‌ನಲ್ಲಿ ಇಂತಹಾ ಸಾಹಸ ಇದೇ ಮೊದಲೇನಲ್ಲ. ಈ ಹಿಂದೆ ಮತದಾನ ಜಾಗೃತಿ, ಪ್ಲಾಸ್ಟಿಕ್ ವಿರುದ್ಧ ಜನಜಾಗೃತಿ, ಸ್ವಾತಂತ್ರ್ಯ ದಿನಾಚರಣೆ ಮೊದಲಾದ ಕಾರ್ಯಗಳಲ್ಲಿಯೂ ಇದು ನಾಡಿನ ಗಮನಸೆಳೆದಿತ್ತು