ಸಖತ್‌ ವೈರಲ್‌ ಆಗ್ತಿದೆ ಸಿತಾರಾ ದಸರಾ ಸ್ಪೆಷಲ್ ಡ್ಯಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ಟಾಲಿವುಡ್‌ ನಟ ಮಹೇಶ್ ಬಾಬು ಮಗಳು ಸಿತಾರಾ ಇದೀಗ ಎಲ್ಲರಿಗೂ ಪರಿಚಿತ. ಅಪ್ಪನ ಹೆಸರಿಲ್ಲದೆ ತನ್ನದೇ ಆದ ಐಡೆಂಟಿಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇಷ್ಟು ಸಣ್ಣ ವಯಸ್ಸಿಗೇ ಜಾಹೀರಾತುಗಳಲ್ಲಿ ನಟಿಸಿ, ಬಂದ ಹಣವನ್ನು ಅಪ್ಪನ ಚಾರಿಟಿಗೆ ಕೊಟ್ಟ ಸಹೃದಯಿ.  ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅವರು ಯಾವಾಗಲೂ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ.  ಅಪ್ಪನ ಹಾದಿಯಲ್ಲಿ ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ ಎಲ್ಲರ ಮೆಚ್ಚುಗೆ ಪಡೆದ ಈಕೆಗೆ ಡಾನ್ಸ್‌ ಅಂದರೆ ಪ್ರಾಣ.

ಪ್ರತಿ ಹಬ್ಬಕ್ಕೂ ಗೊಂಬೆಯಂತೆ ತಯಾರಾಗಿ ಅವುಗಳ ಫೋಟೋಗಳನ್ನು ಹಂಚಿಕೊಳ್ಳುತ್ತಾಳೆ. ಇದೀಗ ದಸರಾ ಹಬ್ಬದ ಸಂದರ್ಭದಲ್ಲಿ ನೃತ್ಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸಿತಾರಾ ಈಗಾಗಲೇ ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಹಲವು ಬಾರಿ ಪೋಸ್ಟ್ ಮಾಡಿದ್ದಾರೆ. ಸಾಂಪ್ರದಾಯಿಕ ಉಡುಗೆ ಧರಿಸಿರುವ ಸಿತಾರಾ ನೃತ್ಯ ನೋಡಲು ಎರಡು ಕಣ್ಣು ಸಾಲದು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here