ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನಸು ಕಾಣದಿರುವುದು ಅಪರಾಧ, ಎಲ್ಲರೂ ಕನಸು ಕಾಣಬೇಕು. ಕನಸಿನ ಬಗ್ಗೆ ಬರೀ ಮಾತನಾಡಿದರೆ ಸಾಲೋದಿಲ್ಲ. ಕನಸನ್ನು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಹಾಕಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿಯಾಗಿದ್ದು, ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದಾರೆ. ನೀವು ಎಲ್ಲ ವಿಷಯಗಳಲ್ಲಿಯೂ ಸಮರ್ಥರಾಗೋಕೆ ಪ್ರಯತ್ನಿಸಿ, ಯಶಸ್ಸು ನಿಮ್ಮ ಹಿಂದೆಯೇ ಬರುತ್ತದೆ. ಈಗ ನೀವು ಗಗನಯಾತ್ರಿಯಾಗಬೇಕು ಎಂದು ಆಸೆಪಟ್ಟಿದ್ದೀರಿ ಎಂದುಕೊಳ್ಳಿ. ಅದು ನನ್ನ ಕನಸು ಎಂದು ಬಾಯಲ್ಲಿ ಹೇಳಿಕೊಂಡರೆ ಸಾಲದು. ನಿಮ್ಮ ಕನಸಿನ ಹತ್ತಿರ ಹೋಗಲು ಒಂದಾದರೂ ಹೆಜ್ಜೆ ಇಟ್ಟಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಸೌಲಭ್ಯಗಳು ಯಶಸ್ಸಿಗೆ ಕಾರಣವಾಗುವುದಿಲ್ಲ, ನೀವು ಪಂಚತಾರಾ ಹೋಟೆಲ್‌ನಲ್ಲಿ ವಾಸಿಸುತ್ತಿದ್ದೀರಿ ಎಂದ ಮಾತ್ರಕ್ಕೆ ನೀವು ನಿಮ್ಮ ಅಧ್ಯಯನದ ಮೇಲೆ ಹೆಚ್ಚು ಗಮನಹರಿಸುತ್ತೀರಿ ಎಂದರ್ಥವಲ್ಲ. ಸೌಲಭ್ಯಗಳು ಗಮನವನ್ನು ಸುಧಾರಿಸುವುದಿಲ್ಲ. ನೀವು ಸೂಕ್ಷ್ಮವಾಗಿ ಗಮನಿಸಿದರೆ, ಟಾಪರ್‌ಗಳಲ್ಲಿ ಹೆಚ್ಚಿನವರು ಬಡತನದಲ್ಲಿ ಬೆಳೆದ ಮಕ್ಕಳೇ ಇರುತ್ತಾರೆ.
ಯಾವುದಾದರೂ ಒಂದು ವಿಷಯದ ಅಧ್ಯಯನ ಮಾಡುತ್ತಿದ್ದೀರಿ, ಆದರೆ ಅದರ ಬಗ್ಗೆ ಸಾಕಷ್ಟು ತಿಳಿದುಕೊಂಡೆ ಎಂದು ಅನಿಸಿದರೆ ಕಲಿಕೆ ನಿಲ್ಲಬಾರದು. ಮತ್ತೊಂದು ವಿಷಯದ ಬಗ್ಗೆ ಗಮನಕೊಡಿ. ಮಾರ್ಕ್ಸ್ ಎಷ್ಟಾದರೂ ಬರಲಿ, ಅತ್ಯುತ್ತಮ ವ್ಯಕ್ತಿಯಾಗೋದು, ಉತ್ತಮ ಜೀವನ ಮಾಡೋದು ಮುಖ್ಯದ ಕೆಲಸ ಎಂದಿದ್ದಾರೆ.



