ನಿಮ್ಮ ದೇಶದ ಪರಿಸ್ಥಿತಿ ಕೆಟ್ಟದಾಗಿದೆ, ಅದರ ಬಗ್ಗೆ ಗಮನ ಇರಲಿ: ಪಾಕ್‌ ಸಚಿವನ ಟ್ವೀಟ್‌ಗೆ ಕೇಜ್ರಿವಾಲ್‌ ತಿರುಗೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಭಾರತದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯ ಕುರಿತು ಹೇಳಿಕೆ ನೀಡಿರುವ ಪಾಕಿಸ್ತಾನದ ಮಾಜಿ ಸಚಿವ ಫವಾದ್ ಹುಸೇನ್ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.

ಅದಕ್ಕೆ ಕೇಜ್ರೀವಾಲ್ ಪಾಕಿಸ್ತಾನದ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಮೊದಲು ಅದನ್ನು ನೋಡಿಕೊಳ್ಳಿ ಎಂದು ಪ್ರತಿಕ್ರಿಯಸಿದ್ದಾರೆ. ಕೇಜ್ರಿವಾಲ್ ಮತದಾನ ಮಾಡಿ ಪ್ರತಿಕ್ರಿಸಿರುವ ಪೋಸ್ಟ್‌ಗೆ ಪಾಕಿಸ್ತಾನದ ಮಾಜಿ ಸಚಿವ ಫವಾದ್ ಹುಸೇನ್ ಶಾಂತಿ ಮತ್ತು ಸಾಮರಸ್ಯವು, ದ್ವೇಷ ಮತ್ತು ಉಗ್ರವಾದದ ಶಕ್ತಿಯನ್ನು ಸೋಲಿಸಲಿ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.


ಚೌಧರಿ ಸಾಹಬ್, ನಾನು ಮತ್ತು ನನ್ನ ದೇಶದ ಜನರು ನಮ್ಮ ಸಮಸ್ಯೆಗಳನ್ನು ನಿಭಾಯಿಸಲು ಸಂಪೂರ್ಣ ಸಮರ್ಥರಾಗಿದ್ದೇವೆ, ನಿಮ್ಮ ಟ್ವೀಟ್ ಅಗತ್ಯವಿಲ್ಲ, ಮೊದಲು ಪಾಕಿಸ್ತಾನದ ಪರಿಸ್ಥಿತಿ ಈಗ ತುಂಬಾ ಕೆಟ್ಟದಾಗಿದೆ, ನಿಮ್ಮ ದೇಶವನ್ನು ನೀವು ನೋಡಿಕೊಳ್ಳಿ ಎಂದು ಕೇಜ್ರಿವಾಲ್ ಪ್ರತಿಕ್ರಿಯಿಸಿದರು.
ಭಾರತದಲ್ಲಿ ನಡೆಯುತ್ತಿರುವ ಚುನಾವಣೆಗಳು ನಮ್ಮ ಆಂತರಿಕ ವಿಷಯವಾಗಿದೆ. ಭಯೋತ್ಪಾದನೆಯ ದೊಡ್ಡ ಪ್ರಾಯೋಜಕರ ಹಸ್ತಕ್ಷೇಪವನ್ನು ಭಾರತ ಸಹಿಸುವುದಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!