ಹೊಸದಿಗಂತ ಚಿಕ್ಕಮಗಳೂರು :
ಹಸುವೊಂದನ್ನು ಅಪಹರಿಸಿ ಹತ್ಯೆ ಮಾಡಿದ ಅಸ್ಸಾಂ ಮೂಲದ 6 ಮಂದಿ ತೋಟ ಕಾರ್ಮಿಕರನ್ನು ಮೂಡಿಗೆರೆ ತಾಲ್ಲೂಕು ಬಾಳೂರು ಪೊಲೀಸರು ಬಂಧಿಸಿದ್ದಾರೆ.
ಬಾಳೂರು ಹೋಬಳಿ ನಿಡುವಾಳೆಯ ಮರ್ಕಲ್ ಎಸ್ಟೇಟ್‌ನಲ್ಲಿ ಆರೋಪಿಗಳು ಹಸುವನ್ನು ಕೊಂದು ಮಾಂಸ ಮಾಡಿ ಬಾಳೆ ಎಲೆಯಲ್ಲಿಟ್ಟಿದ್ದರು. ಹಸುವಿನ ತಲೆ ಇನ್ನಿತರೆ ಅಂಗಾಂಗಗಳನ್ನು ಹೂತು ಹಾಕುವ ಸಲುವಾಗಿ ಸ್ಥಳದಲ್ಲೇ ಒಂದು ಗುಂಡಿಯನ್ನು ಸಹ ತೋಡಿದ್ದರು. ಆದರೆ ಯಾವುದೋ ಭಯದಿಂದ ಅದನ್ನೆಲ್ಲಾ ಅರ್ಧಕ್ಕೆ ಬಿಟ್ಟುಹೋಗಿದ್ದರು. ಇದನ್ನು ಕಂಡ ತೋಟದ ರೈಟರ್ ಅಭಿಲಾಷ್ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಸ್ಸಾಂ ಮೂಲದ ಕಾರ್ಮಿಕರಾದ ಅಜೀರ್ ಅಲೀ, ಅಕ್ಬರ್, ಇಜಾಹುಲ್, ಮೋಜೆರ್ ಅಲಿ, ಮಂಜುಲ್ ಹಕ್ ಎಂಬುವವರನ್ನು ಬಂಧಿಸಲಾಗಿದ್ದು, ಅವರು ಅಸ್ಸಾಂನ ದರಾಂಗ್ ಜಿಲ್ಲೆ ಯವರಾಗಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.