ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ಡೆಂಗ್ಯೂ ಪ್ರಕರಣಗಳ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಈವರೆಗೂ 12, 958 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ರಾಜಧಾನಿ ಢಾಕಾದಲ್ಲಿ ಒಂದೇ ದಿನದಲ್ಲಿ 516 ಮಂದಿಗೆ ಸೋಂಕು ಕಂಡಿದೆ.
ಸೊಳ್ಳೆಗಳಿಂದ ಹರಡುವ ಡೆಂಗ್ಯೂ ಬಂದಿದೆ ಎಂದು ತಿಳಿಯೋದು ಹೇಗೆ?
ಜ್ವರ
ತಲೆನೋವು
ಮೈಕೈನೋವು
ಹಸಿವಾಗದೇ ಇರುವುದು
ವಾಕರಿಕೆ, ವಾಂತಿ
ಸುಸ್ತು, ಗಂಟಲು ನೋವು
ಕಣ್ಣು ನೋವು
ದೇಹದಲ್ಲಿ ಕೆಂಪು ಕಲೆಗಳು
ಉಸಿರಾಟದ ತೊಂದರೆ
ಮೂರ್ಛೆ
ಮೂತ್ರ ವಿಸರ್ಜನೆ ಮಾಡದಿರುವುದು
ಜಾಂಡೀಸ್
ದೇಹದ ಯಾವುದೇ ಭಾಗದಿಂದ ರಕ್ತಸ್ರಾವ
ಕಪ್ಪು ಮಲ
ತಡೆಗಟ್ಟುವುದು ಹೇಗೆ?
ಮನೆಯ ಸುತ್ತಮುತ್ತ ಗಲೀಜು, ನೀರು ನಿಲ್ಲುವ ಸಾಧ್ಯತೆ ಇರುವ ಯಾವ ವಸ್ತುವನ್ನೂ ಹಾಗೇ ಬಿಡಬೇಡಿ
ಸಂಜೆಯೊಳಗೆ ಕಿಟಕಿ ಬಾಗಿಲುಗಳನ್ನು ಹಾಕಿಬಿಡಿ
ಮಕ್ಕಳಿಗೆ ಉದ್ದ ತೋಳಿನ ಬಟ್ಟೆ ಹಾಗೂ ಪ್ಯಾಂಟ್ ತೊಡಿಸಿ
ಮೈಗೆ ಕೊಬ್ಬರಿ ಎಣ್ಣೆ ಹಚ್ಚಿಬಿಡಿ
ಸೊಳ್ಳೆ ಬತ್ತಿ ಅಥವಾ ಕಾಯಿಲ್ ಬಳಸಿ
ರಿಪೆಲ್ಲೆಂಟ್, ಕ್ರೀಂಗಳನ್ನು ಬಳಸಬಹುದು.
ಯಾವ ಆಹಾರ ಸೇವಿಸಬೇಕು?
ಕಿತ್ತಳೆ, ನಿಂಬೆ, ಮೂಸಂಬಿ ವಿಟಮಿನ್ ಸಿ ಇರುವ ಹಣ್ಣುಗಳು
ಶುಂಠಿ
ಮೊಸರು
ಪಾಲಕ್
ಬಾದಾಮಿ
ಅರಿಶಿಣ
ಬೆಳ್ಳುಳ್ಳಿ
ಡೆಂಗ್ಯೂ ಲಕ್ಷಣಗಳು ಕಾಣಿಸಿದರೆ ತಡಮಾಡದೆ ವೈದ್ಯರನ್ನು ಭೇಟಿ ಮಾಡಿ ರಕ್ತ ಪರೀಕ್ಷೆಗೆ ಒಳಗಾಗಿ