ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕೋರಮಂಗಲ ಚೆಕ್‌ಪೋಸ್ಟ್ ಬಳಿ ನಿಂತುಕೊಂಡು ವೇಶ್ಯಾವಾಟಿಕೆಗೆ ಪ್ರಚೋದನೆ ನೀಡುತ್ತಿದ್ದ ಆರು ವಿದೇಶಿ ಮಹಿಳೆಯರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಲೈಂಗಿಕ ಕ್ರಿಯೆಗಾಗಿ ರಸ್ತೆ ಬದಿ ಹೋಗುವ ಪುರುಷರನ್ನು ಪ್ರಚೋದಿಸುತ್ತಿದ್ದ ಮಹಿಳೆಯರ ಬಗ್ಗೆ ತಿಳಿದುಕೊಂಡ ಪೊಲೀಸರು ರೇಡ್ ಮಾಡಿದ್ದಾರೆ. ಈ ವೇಳೆ ಆರು ವಿದೇಶಿ ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದೆ.
ಇವರ ಬಳಿ ಪಾಸ್‌ಪೋರ್ಟ್, ವೀಸಾ ಎಲ್ಲವೂ ಇದ್ದು, ಭಾರತಕ್ಕೆ ಬಂದು ವೇಶ್ಯಾವಾಟಿಕೆಗೆ ಇಳಿದಿದ್ದು ಯಾಕೆ ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.



