SHOCKING | ಕಿನ್ಯಾದಲ್ಲಿ ಕಂದಕಕ್ಕೆ ಉರುಳಿದ ಬಸ್: ಕೇರಳದ ಐವರ ಸಹಿತ ಆರು ಭಾರತೀಯರ ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಲಿಸುತ್ತಿದ್ದ ಬಸ್ಸೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಘಟನೆ ಕಿನ್ಯಾದ ನ್ಯಾಂಡರುವಾ ಕೌಂಟಿಯ ಓಲ್ ಜೊರೊರೊಕ್-ನಕುರು ರಸ್ತೆಯಲ್ಲಿರುವ ಗಿಚಾಕಾದಲ್ಲಿ ನಡೆದಿದ್ದು, ಈ ಅವಘಡದಲ್ಲಿ ೧೮ ತಿಂಗಳ ಮಗು ಸೇರಿ ಕೇರಳ ಮೂಲದ ಐವರ ಸಹಿತ ಆರು ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಮೃತರೆಲ್ಲರೂ ಕತಾರ್‌ನಲ್ಲಿ ನೆಲೆಸಿದ್ದ ಭಾರತೀಯ ಮೂಲದವರಾಗಿದ್ದಾರೆ. ಮೃತರನ್ನು ಗೀತಾ ಶೋಜಿ ಐಸಾಕ್ (58), ಜಸ್ನಾ ಕುಟ್ಟಿಕ್ಕಟ್ಟುಚಲಿಲ್ (29), ರುಹಿ ಮೆಹ್ರಿ ಮೊಹಮ್ಮದ್ (18 ತಿಂಗಳು), ಒಟ್ಟಪಾಲಂ ಮೂಲದ ರಿಯಾ ಎನ್ (41) ಮತ್ತು ಟೈರಾ ರೊಡ್ರಿಗಸ್ (8) ಎಂದು ಗುರುತಿಸಲಾಗಿದೆ. ಮತೋರ್ವನ ಗುರುತು ಪತ್ತೆಯಾಗಿಲ್ಲ.
ಈ ಅಪಘಾತದಲ್ಲಿ ೨೭ ಮಂದಿ ಗಾಯಗೊಂಡಿದ್ದಾರೆ. ಇವರೆಲ್ಲರೂ ಪ್ರವಾಸಿಗರಾಗಿದ್ದು, ನ್ಯಾಹುರುರುವಿನ ಪನಾರಿ ರೆಸಾರ್ಟ್‌ಗೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಬಸ್‌ನಲ್ಲಿ ಚಾಲಕನ ಸಹಿತ 28 ಪ್ರವಾಸಿಗರು, ಮೂವರು ಸ್ಥಳೀಯ ಮಾರ್ಗದರ್ಶಕರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!