ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಯಾಲಿಫೋರ್ನಿಯಾದ ಮುರಿಯೆಟಾದಲ್ಲಿ ಮುಂಜಾನೆ ಸೆಸ್ನಾ ವ್ಯಾಪಾರದ ಜೆಟ್ ಅಪಘಾತಕ್ಕೀಡಾಗಿದ್ದು, ಆರು ಜನರು ಸಾವನ್ನಪ್ಪಿದ್ದಾರೆ. ಫ್ರೆಂಚ್ ವ್ಯಾಲಿ ವಿಮಾನ ನಿಲ್ದಾಣದ ಬಳಿ ಸೆಸ್ನಾ ವ್ಯಾಪಾರದ ಜೆಟ್ ಅಪಘಾತಕ್ಕೀಡಾಗಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಹೇಳಿದೆ. ವಿಮಾನದಲ್ಲಿದ್ದ ಆರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ರಿವರ್‌ಸೈಡ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ.
ವಿಮಾನವು ವೆಗಾಸ್‌ನ ಹ್ಯಾರಿ ರೀಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಸ್ಯಾನ್ ಡಿಯಾಗೋದಿಂದ ಉತ್ತರಕ್ಕೆ 65 ಮೈಲಿ ದೂರದಲ್ಲಿ ಪತನಗೊಂಡಿದೆ. ಜಮೀನಿನಲ್ಲಿ ವಿಮಾನ ಪತನಗೊಂಡು ಅಲ್ಲಿದ್ದ ಮರಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಈ ವಿಮಾನ ಅಪಘಾತದ ಕುರಿತು ತನಿಖೆಗೆ ಆದೇಶಿಸಲಾಗಿದೆ. ವಿಮಾನ ಹೇಗೆ ಪತನಗೊಂಡಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ವಿಮಾನ ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರ ವಿವರಗಳು ಇನ್ನಷ್ಟೇ ಸಿಗಬೇಕಿದೆ.