ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿಯಾಗಿದ್ದು, ಅಂತ್ಯಕ್ರಿಯೆಗೆ ಹೊರಟಿದ್ದ ಆರು ಮಂದಿ ಮೃತಪಟ್ಟಿದ್ದಾರೆ.
ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆಂದು ಒಂದೇ ಕುಟುಂಬದ ಆರು ಮಂದಿ ಹೊರಟಿದ್ದರು. ಹರ್ಯಾಣದ ಸಿರ್ಸಾ ಜಿಲ್ಲೆಯ ದಬ್ವಾಲಿ ಬಳಿ ಕಾರು ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿಗೆ ಹೊರಟಿದೆ. ನಂತರ ಮರಕ್ಕೆ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಐವರು ಮೃತಪಟ್ಟಿದ್ದಾರೆ. ಇನ್ನೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಕಾರು ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ, ಅತಿ ವೇಗವಾಗಿ ಗಾಡಿ ಚಾಲನೆ, ಮರ ಕಂಡರೂ ಬ್ರೇಕ್ ಹಾಕದಿರುವುದನ್ನು ಗಮನಿಸಿದರೆ ಡ್ರೈವರ್ ನಿದ್ದೆ ಮಂಪರಿನಲ್ಲಿ ಚಾಲನೆ ಮಾಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ರಾಜಸ್ಥಾನದ ಬನ್ವಾರಿ ಲಾಲ್ ವರ್ಮಾ, ಪತ್ನಿ ದರ್ಶನಾ, ಸಹೋದರ ಕೃಷ್ಣಕುಮಾರ್, ಪತ್ನಿ ಗುದ್ದಿದೇವಿ, ಮತ್ತೊಬ್ಬ ಸಹೋದರ ಓಂ ಪ್ರಕಾಶ್ ಹಾಗೂ ಅವರ ಪತ್ನಿ ಚಂದ್ರಕಲಾ ಮೃತರು.