ಶಿರಸಿಯಲ್ಲಿ ಮತಾಂತರಕ್ಕೆ ಯತ್ನಿಸಿದ ಆರು ಮಂದಿ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿರಸಿಯಲ್ಲಿ ಮತಾಂತರ ಮಾಡಲು ಯತ್ನಿಸುತ್ತಿದ್ದ ಆರು ಮಂದಿಯನ್ನು ಬಂಧಿಸಲಾಗಿದೆ.

ಹಾವೇರಿ ಜಿಲ್ಲೆಯ ಪರಮೇಶ್ವ ನಾಯ್ಕ, ಸುನೀತಾ ನಾಯ್ಕ, ಧನಂಜಯ್ ಶಿವಣ್ಣ, ಶಾಲಿನಿ ರಾಣಿ, ಕುಮಾರ ಲಮಾಣಿ ಹಾಗೂ ತಾರಾ ಲಮಾಣಿ ಆರೋಪಿಗಳು.

ಜಗಳಮನೆ ಗ್ರಾಮದ ಆದರ್ಶ ನಾಯ್ಕ ಎನ್ನುವವರ ಮನೆಗೆ ಈ ತಂಡ ಆಗಮಿಸಿ ಮತಾಂತರಕ್ಕೆ ಯತ್ನಿಸಿದ್ದಾರೆ. ಆರೋಗ್ಯ ಹಾಗೂ ಆರ್ಥಿಕ ಪರಿಸ್ಥಿತಿ ಸರಿಯಾಗಬೇಕಿದ್ದರೆ ಕ್ರೈಸ್ತ ಧರ್ಮ ಸ್ವೀಕರಿಸಿ ಎಂದು ಹೇಳಿದ್ದಾರೆ. ನಾವೂ ಹಿಂದೂಗಳಾಗಿಯೇ ಇದ್ದೆವು, ಇದೀಗ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದೇನೆ, ಇದರಿಂದ ನಮ್ಮ ಕಷ್ಟಗಳು ಹೋಗಿವೆ ಎಂದು ಮನವೊಲಿಸಲು ಯತ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here