ಹೊಸದಿಗಂತ ವರದಿ ಬೆಳಗಾವಿ:
ಭೂಮಿ ಕಳೆದುಕೊಂಡು ಆರು ವರ್ಷ ಕಳೆದರೂ ಸಂತ್ರಸ್ತರಿಗೆ ಪರಿಹಾರ ನೀಡದ ಬೆಳಗಾವಿ ಜಿಪಂ ಸಿಇಓ ರಾಹುಲ್ ಶಿಂಧೆ ಸರಕಾರಿ ಕಾರು ಜಪ್ತಿ ಮಾಡಲಾಗಿದೆ.
ಕಿತ್ತೂರು ತಾಲೂಕಿನ ಕುಲವಳ್ಳಿ ಗ್ರಾಮದಲ್ಲಿ 21 ಎಕರೆ ರೈತರ ಜಮೀನನ್ನು ಸರಕಾರ ಹೆಚ್ಚುವರಿ ಭೂ ಸ್ವಾಧೀನ ಮಾಡಿಕೊಂಡು ಕಲವಳ್ಳಿಯಿಂದ ಕತ್ರಿದಡ್ಡಿ ಗ್ರಾಮ ಮಾಡಿ, ಅಲ್ಲಿ ಎಲ್ಲ ಸರಕಾರಿ ಕಚೇರಿಗಳನ್ನ, ಪಶುಸಂಗೋಪನೆ ಇಲಾಖೆ ಆಸ್ಪತ್ರೆ ಸೇರಿದಂತೆ ಶಾಲೆಗಳ ನಿರ್ಮಿಸಿ 1990ರಿಂದ 93ರವರೆಗೆ ಎಲ್ಲ ನಾಗರಿಕ ಸೇವೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಾಯಿತು. ಆದರೆ ಜಮೀನು ಕಳೆದುಕೊಂಡವರಿಗೆ ಮಾತ್ರ ಪರಿಹಾರ ನೀಡಿರಲಿಲ್ಲ.
ಆಗ ಯಾವುದೇ ನಿಯಮಗಳನ್ನು ಪಾಲಿಸದೇ ಎಲ್ಲ ಕಾನೂನು ಬಾಹಿರವಾಗಿ ಜಮೀನುಗಳನ್ನು ಒತ್ತುವರಿ ಮಾಡಲಾಗಿತ್ತು. ನಂತರ 2008ರಲ್ಲಿ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಎಕೆರೆಗೆ 37 ಸಾವಿರ ರೂ.ದಂತೆ ಆವಾರ್ಡನ್ನು ಪಾಸ್ ಮಾಡಲಾಯಿತು. ಮತ್ತೆ ರೈತರು ನ್ಯಾಯಾಲಯಕ್ಕೆ ಮೊರೆ ಹೋದಾಗ ಎಕೆರೆಗೆ 4 ಲಕ್ಷ ರೂ. ಕೋಡಬೇಕು ಎಂದು ಬೈಲಹೊಂಗಲ ನ್ಯಾಯಾಲಯ ಆದೇಶ ಮಾಡಿತ್ತು. ಭೂಮಿ ಕಳೆದುಕೊಂಡ ಕೇಸ್ ನಲ್ಲಿ ಒಟ್ಟು ನಾಲ್ಕು ಪ್ರಕರಣಗಳಿದ್ದು, ಆರು ವರ್ಷಗಳು ಕಳೆದರೂ ಇಲ್ಲಿಯವರೆಗೆ ಪರಿಹಾರ ನೀಡಿದ ಹಿನ್ನೆಲೆಯಲ್ಲಿ ಜಿಪಂ ಸಿಇಓ ಸರಕಾರಿ ಕಾರು, ಕಚೇರಿಯ ಕಂಪ್ಯೂಟರ್ ಹಾಗೂ ಇನ್ನಿತರ ವಸ್ತುಗಳನ್ನು ಜಪ್ತ ಮಾಡಲಾಗುತ್ತಿದೆ ಎಂದು ಸರಕಾರಿ ವಕೀಲ ಮೀಸಾಳೆ ಹೇಳಿದರು.
ಭೂಮಿ ಕಳೆದುಕೊಂಡು ಆರು ವರ್ಷವಾದ್ರೂ ಪರಿಹಾರ ಇಲ್ಲ : ಜಿಪಂ ಸಿಇಓ ಕಾರು ಜಪ್ತಿಗೆ ನ್ಯಾಯಾಲಯ ಆದೇಶ

