ಆರು ವರ್ಷಗಳ ಪ್ರೀತಿಗೆ ಬ್ರೇಕ್: ಮಲೈಕಾ- ಅರ್ಜುನ್‌ ಬ್ರೇಕಪ್?

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ. ಈ ಕುರಿತು ಬಿಟೌನ್‍ ನಲ್ಲಿ ಸುದ್ದಿ ಹರಿದಾಡುತ್ತಿದೆ . ಪರಸ್ಪರ ಇಬ್ಬರೂ ಒಪ್ಪಿಗೆ ಪಡೆದುಕೊಂಡೇ ದೂರವಾಗಿದ್ದಾರೆ ಎಂದು ಹೇಳಲಾಗ್ತಿದೆ.

ಸಾಕಷ್ಟು ವರ್ಷಗಳಿಂದ ಲಿವ್ ಇನ್ ರಿಲೇಷನ್ ಶಿಪ್‌ನಲ್ಲಿರೋ ಈ ಜೋಡಿ, ಭವಿಷ್ಯದಲ್ಲಿ ಒಟ್ಟಿಗೆ ಇರುವ ಆಲೋಚನೆ ಕುರಿತು ನಟಿ ಮಲೈಕಾ ಸಾಕಷ್ಟು ಬಾರಿ ಹೇಳಿಕೊಂಡಿದ್ದರು.

ನಟಿ ಮಲೈಕಾ ಅರ್ಜುನ್ ಕಪೂರ್‌ಗಿಂತ ವಯಸ್ಸಿನಲ್ಲಿ ದೊಡ್ಡವರು, ಇವರ ಲವ್ವಿ ಡವ್ವಿ ನೋಡಿರೋ ನೆಟ್ಟಿಗರು ಅದೆಷ್ಟೋ ಬಾರಿ ಇವರಿಬ್ಬರದ್ದು ಟೈಮ್ ಪಾಸ್ ಲವ್ ಎಂದು ಹೇಳಿದ್ದು ಇದೆ. ಆದರೆ ಈ ಹಿಂದೆ ಮಲೈಕಾ ತಮ್ಮ ಪ್ರೀತಿಯ ಜೀವನದ ಕುರಿತು ಮನಬಿಚ್ಚಿ ಸಂದರ್ಶನವೊಂದರಲ್ಲಿ ಮಾತಾನಾಡಿದ್ದರು.

ಪ್ರತಿಯೊಂದು ರಿಲೇಶನ್‌ಶಿಷ್‌ನಲ್ಲಿಯೂ ತನ್ನದೇ ಆದ ರೀತಿ ನೀತಿಗಳಿರುತ್ತದೆ. ನಾವು ಒಟ್ಟಿಗೆ ಭವಿಷ್ಯವನ್ನು ಕಳೆಯುವ ವಿಚಾರ ನಮಗೆಷ್ಟೇ ತಿಳಿದಿರಬೇಕು ಎಂದು ಇನಿಯನ ಜತೆ ಭವಿಷ್ಯವನ್ನು ಒಟ್ಟಿಗೆ ಕಳೆಯುವ ಆಸೆಯನ್ನು ವ್ಯಕ್ತಪಡಿಸಿದ್ದರು. ಕೆಲ ದಿನಗಳ ಹಿಂದೆ ಇವರಿಬ್ಬರ ಬ್ರೇಕ್ ಅಪ್ ವಿಚಾರ ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಈ ಬಗ್ಗೆ ಇಬ್ಬರೂ ಮೌನವಾಗಿದ್ದಾರೆ. ತಮ್ಮ ಸಂಬಂಧವನ್ನು ಪ್ರಚಾರ ಮಾಡಲು ಯಾರಿಗೂ ಅವಕಾಶ ನೀಡಲು ಅವರು ಬಯಸುವುದಿಲ್ಲ. ಅಷ್ಟಕ್ಕೂ ಈ ಜೋಡಿ ಒಬ್ಬರನ್ನೊಬ್ಬರು ತುಂಬಾ ಗೌರವಿಸುತ್ತಾರೆ ಮತ್ತು ಒಬ್ಬರಿಗೊಬ್ಬರು ಬಲವಾದ ಸ್ತಂಭಗಳಂತೆ ನಿಂತಿದ್ದಾರೆ ಎಂದೇ ಹೇಳಲಾಗುತ್ತದೆ. ಆದರೆ ಬ್ರೇಕಪ್‌ಗೆ ನಿಜವಾದ ಕಾರಣ ಇದುವರೆಗೆ ತಿಳಿದು ಬರಲಿಲ್ಲ. ಬ್ರೇಕಪ್‌ ಬಳಿಯೂ ಪರಸ್ಪರ ಗೌರವಿಸುವುದನ್ನು ಮುಂದುವರಿಸುತ್ತಾರೆ ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!