ಮಳೆಗಾಲದಲ್ಲಿ ತೇವಾಂಶ ಹೆಚ್ಚಾಗುವ ಹಿನ್ನೆಲೆಯಲ್ಲಿ ಮೊಡವೆ ಸಮಸ್ಯೆ ಹೆಚ್ಚಾಗುತ್ತೆ. ಕೆಲವರಿಗೂ ಇದು ತಾತ್ಕಾಲಿಕವಾಗಿದ್ದರೂ, ಕೆಲವರಿಗೆ ದೀರ್ಘಕಾಲದ ತೊಂದರೆ ಆಗಿ ಬಿಡುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ರಾಸಾಯನಿಕ ಯುಕ್ತ ಕ್ರೀಮ್‌ಗಳಿಗೆ ಬದಲಾಗಿ ನೈಸರ್ಗಿಕ ಮನೆಮದ್ದು ಬಳಸುವುದೇ ಉತ್ತಮ. ಇದಕ್ಕೆ ಉತ್ತಮವಾದ ಆಯ್ಕೆ ಎಂದರೆ ಅರಿಶಿಣ ಹಾಗೂ ಬೇವಿ ಮಿಶ್ರಿತ ಫೇಸ್‌ಪ್ಯಾಕ್.
ಬೇವಿನಲ್ಲಿ ಬ್ಯಾಕ್ಟೀರಿಯಾ ನಾಶಕ ಗುಣಗಳಿದ್ದು, ಚರ್ಮದ ಸೋಂಕು ತಗ್ಗಿಸುತ್ತದೆ. ಇದೇ ರೀತಿ ಅರಿಶಿಣವು ಉರಿಯೂತ ಗುಣಪಡಿಸಿ, ಕಲೆಗಳನ್ನು ಕಡಿಮೆ ಮಾಡುತ್ತದೆ. ಈ ಎರಡನ್ನು ಜೇನುತುಪ್ಪ ಮತ್ತು ರೋಸ್‌ವಾಟರ್ ಜೊತೆ ಬೆರೆಸಿ ಪೇಸ್ಟ್ ಮಾಡಿಕೊಳ್ಳುವುದರಿಂದ ನಿಮ್ಮ ಚರ್ಮದ ಮೇಲಿನ ಮೊಡವೆಗಳು ಕಡಿಮೆಯಾಗುತ್ತವೆ.
ಬೇಕಾಗುವ ಸಾಮಗ್ರಿಗಳು:
1 ಟೇಬಲ್ ಸ್ಪೂನ್ ಬೇವಿನ ಪುಡಿ
ಅರ್ಧ ಟೀಸ್ಪೂನ್ ಅರಿಶಿಣ ಪುಡಿ
1 ಟೇಬಲ್ ಸ್ಪೂನ್ ಜೇನುತುಪ್ಪ
2-3 ಟೇಬಲ್ ಸ್ಪೂನ್ ರೋಸ್ ವಾಟರ್
ಒಂದು ಬಟ್ಟಲಿನಲ್ಲಿ ಬೇವಿನ ಪುಡಿ ಹಾಗೂ ಅರಿಶಿಣವನ್ನು ಸೇರಿಸಿ. ನಂತರ ಜೇನುತುಪ್ಪ ಮತ್ತು ರೋಸ್‌ವಾಟರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನುಣುಪಾದ ಪೇಸ್ಟ್ ಆಗಬೇಕು, ತುಂಬಾ ತೆಳುವಾಗಬಾರದು. ಬೇಕಾದರೆ ಸ್ವಲ್ಪ ಹೆಚ್ಚುವರಿ ರೋಸ್ ವಾಟರ್ ಹಾಕಬಹುದು.
ಬಳಸುವ ವಿಧಾನ ಹೇಗೆ?
ಮೊದಲು ಮುಖವನ್ನು ಕ್ಲೆನ್ಸರ್‌ನಿಂದ ಮುಖ ತೊಳೆದು ಒಣಗಿಸಿ. ನಂತರ ಈ ಫೇಸ್‌ಪ್ಯಾಕ್‌ನ್ನು ಬೆರಳುಗಳಿಂದ ಅಥವಾ ಬ್ರಷ್‌ನಿಂದ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಕಣ್ಣು ಮತ್ತು ತುಟಿಗಳ ಸುತ್ತ ಹಚ್ಚಬಾರದು. ಈ ಪ್ಯಾಕ್‌ನ್ನು 15-20 ನಿಮಿಷ ಬಿಟ್ಟು, ನಂತರ ಕೈಗೆ ನೀರು ಸ್ಪರ್ಶಿಸಿ ವೃತ್ತಾಕಾರವಾಗಿ ಮಸಾಜ್ ಮಾಡಿ. ಕೊನೆಗೆ ತಣ್ಣನೆಯ ನೀರಿನಿಂದ ತೊಳೆಯಿರಿ ಮತ್ತು ಸೂಕ್ತ ಮಾಯಿಶ್ಚರೈಸರ್ ಹಚ್ಚಿ.
ವಾರಕ್ಕೆ ಎರಡು ಬಾರಿ ಮಾಡಿದರೆ ಸಾಕು, ಮೊಡವೆ ಮಾತ್ರವಲ್ಲದೆ, ಅದರ ಕಲೆಗಳೂ ಕಡಿಮೆಯಾಗುತ್ತವೆ. ನೈಸರ್ಗಿಕವಾಗಿ ತಾಜಾ ಹಾಗೂ ಸ್ವಚ್ಛ ಚರ್ಮ ನಿಮ್ಮದಾಗುತ್ತದೆ.