ಮಳೆಗಾಲ ಆರಂಭವಾಗುತ್ತಿದ್ದಂತೆ ತ್ವಚಾ ಸಮಸ್ಯೆಗಳು ಕೂಡ ಹೆಚ್ಚಾಗುತ್ತವೆ. ವಿಶೇಷವಾಗಿ ಮೊಡವೆಗಳು (Acne) ಈ ಋತುವಿನಲ್ಲಿ ಸಾಮಾನ್ಯ ತೊಂದರೆ. ಮಳೆಗಾಲದ ತೇವಾಂಶ ಹಾಗೂ ಜಾಸ್ತಿ ಗಾಳಿ ಚರ್ಮದ ರಂಧ್ರಗಳನ್ನು ಮುಚ್ಚಿ ಮೊಡವೆಗಳಿಗೆ ಕಾರಣವಾಗಬಹುದು. ಆದರೆ ಸರಿಯಾದ ತ್ವಚಾ ಆರೈಕೆಯಿಂದ ಇದನ್ನು ನಿಯಂತ್ರಿಸಲು ಸಾಧ್ಯ.
ಮೊದಲನೆಯದಾಗಿ, ತ್ವಚೆ ಯಾವಾಗಲೂ ತಾಜಾ ಹಾಗು ಶುದ್ಧವಾಗಿರಬೇಕೆಂಬುದು ಮುಖ್ಯ. ದಿನಕ್ಕೆ ಕನಿಷ್ಠ ಎರಡು ಬಾರಿ ಸೌಮ್ಯ ಕ್ಲೆನ್ಸರ್‌ನಿಂದ ಮುಖವನ್ನು ಸ್ವಚ್ಛಗೊಳಿಸಿ.
ಮಾಯಿಶ್ಚರೈಸರ್: ಮಳೆಗಾಲದಲ್ಲಿ ಚರ್ಮ ತೈಲಯುಕ್ತವಾಗಿರಬಹುದು ಅಂತ ಹೇಳಿ ಮಾಯಿಶ್ಚರೈಸರ್ ಬಳಸದಿರುವುದು ತಪ್ಪು. ನೀರು ಆಧಾರಿತ, ತೈಲ ಮುಕ್ತ ಹಗುರ ಮಾಯಿಶ್ಚರೈಸರ್ ಬಳಸಿ ತ್ವಚೆಯನ್ನು ಹೈಡ್ರೇಟ್ ಮಾಡಿ.
ಸನ್‌ಸ್ಕ್ರೀನ್: ಬಿಸಿಲಿಲ್ಲ ಅಂತ ನಿರ್ಲಕ್ಷ್ಯ ಬೇಡ. ಮಾನ್ಸೂನ್ ಸೀಸನ್ನಲ್ಲಿಯೂ ಸನ್‌ಸ್ಕ್ರೀನ್ ಅಗತ್ಯ. ಹಗುರವಾದ ಸನ್‌ಸ್ಕ್ರೀನ್ ತ್ವಚೆಗೆ ಉತ್ತಮ.
ಕೂದಲು ಸ್ವಚ್ಛವಾಗಿಡಿ: ಎಣ್ಣೆ ಅಥವಾ ಮಳೆಯ ನೀರಿನಿಂದ ಕೂದಲು ಒದ್ದೆಯಾಗಿದ್ದರೆ, ಅದು ಮುಖದ ತ್ವಚೆಗೆ ತಾಗಿ ಮೊಡವೆಗಳ ಕಾರಣವಾಗಬಹುದು. ಪ್ರತಿದಿನ ಕೂದಲನ್ನು ಶಾಂಪೂ ಬಳಸದೆ ಸಹ ನೀರಿನಿಂದ ತೊಳೆಯಿರಿ.
ಮೇಕಪ್ ಬಳಕೆಯಲ್ಲಿ ಜಾಗ್ರತೆ: ಮಳೆಗಾಲದಲ್ಲಿ ಹೆಚ್ಚು ಮೇಕಪ್ ಬೇಡ. ನೀರು ಆಧಾರಿತ, ಹಗುರವಾದ ಮೇಕಪ್ ಉತ್ಪನ್ನಗಳನ್ನು ಮಾತ್ರ ಬಳಸಿ. ಮಲಗುವ ಮೊದಲು ಚೆನ್ನಾಗಿ ಕ್ಲೆನ್ಸ್ ಮಾಡುವುದು ಅತ್ಯಾವಶ್ಯಕ.
ಆಹಾರ ಶುದ್ಧವಾಗಿರಲಿ: ಹೆಚ್ಚು ಎಣ್ಣೆಯುಕ್ತ, ತೊಳೆಯದ ಆಹಾರಗಳು ಮೊಡವೆಗಳಿಗೆ ಕಾರಣವಾಗಬಹುದು. ಹಣ್ಣು, ತರಕಾರಿಗಳು, ಜೀರ್ಣಕರವಾದ ಆಹಾರಗಳನ್ನು ಸೇವಿಸಿ.
ಟೋನರ್ ಬಳಸಿ: ಮುಖ ಶುದ್ಧವಾದ ನಂತರ ಟೋನರ್ ಬಳಸಿ. ಇದು ಚರ್ಮದ pH ಲೆವೆಲ್ ಬದಲಾಯಿಸದೇ ತಾಜಾತನ ನೀಡುತ್ತದೆ.