ಮುಖಕ್ಕೆ ಸರಿಯಾದ ಆರೈಕೆ ನೀಡದಿದ್ದರೆ ಚರ್ಮ ಮಸುಕಾಗಿ, ಮಂದವಾಗಿ ಕಾಣುತ್ತದೆ. ಇದರಿಂದ ಮುಕ್ತವಾಗಲು ಹಲವರು ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ. ಪಾರ್ಲರ್‌ನಲ್ಲಿ ಮಾಡುವ ಫೇಶಿಯಲ್‌ಗಳಿಗೆ ಸಾವಿರಾರು ರೂಪಾಯಿ ಖರ್ಚಾಗುವುದರಿಂದ, ಮನೆಯಲ್ಲೇ ಲಭ್ಯವಿರುವ ಸಾಮಾನ್ಯ ಪದಾರ್ಥಗಳಿಂದ ನೈಸರ್ಗಿಕ ಫೇಶಿಯಲ್ ಮಾಡಿಕೊಳ್ಳುವ ವಿಧಾನಗಳು ಹೆಚ್ಚು ಜನಪ್ರಿಯವಾಗುತ್ತಿವೆ.
ಚರ್ಮದ ಹೊಳಪನ್ನು ಹೆಚ್ಚಿಸಲು, ಡೆಡ್ ಸ್ಕಿನ್ ತೆಗೆದುಹಾಕಲು ಮತ್ತು ಡಲ್‌ನೆಸ್ ನಿವಾರಿಸಲು ತಿಂಗಳಿಗೊಮ್ಮೆ ಫೇಶಿಯಲ್ ಮಾಡಿಕೊಳ್ಳುವುದರಿಂದ ಲಾಭ ಸಿಗುತ್ತದೆ.
- ಕಡಲೆ ಹಿಟ್ಟಿನ ಫೇಶಿಯಲ್: ಒಂದು ಚಮಚ ಮೊಸರು ಮತ್ತು ಒಂದು ಚಮಚ ಹಿಟ್ಟನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ ವೃತ್ತಾಕಾರವಾಗಿ ಮಸಾಜ್ ಮಾಡಿ 15-20 ನಿಮಿಷ ಬಿಡಬೇಕು. ನಂತರ ಮುಖ ತೊಳೆಯಬೇಕು. ಜೊತೆಗೆ ಅರ್ಧ ಚಮಚ ಅರಿಶಿನ ಪುಡಿ, 1-2 ಚಮಚ ರೋಸ್ ವಾಟರ್ ಹಾಗೂ ಒಂದು ಚಮಚ ಕಡಲೆ ಹಿಟ್ಟನ್ನು ಬೆರೆಸಿ ಹಚ್ಚುವುದರಿಂದ ಚರ್ಮವು ಇನ್ನಷ್ಟು ಹೊಳೆಯುತ್ತದೆ.
- ಮುಲ್ತಾನಿ ಮಿಟ್ಟಿ ಫೇಶಿಯಲ್ : ಮೊದಲ ಹಂತದಲ್ಲಿ ಒಂದು ಚಮಚ ಮುಲ್ತಾನಿ ಮಿಟ್ಟಿ ಮತ್ತು ಒಂದು ಚಮಚ ಮೊಸರು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 15-20 ನಿಮಿಷ ಬಿಡಬೇಕು. ಎರಡನೇ ಹಂತದಲ್ಲಿ ಮುಲ್ತಾನಿ ಮಿಟ್ಟಿಗೆ ಅರ್ಧ ಚಮಚ ಅರಿಶಿನ ಮತ್ತು 1-2 ಚಮಚ ರೋಸ್ ವಾಟರ್ ಬೆರೆಸಿ ಪೇಸ್ಟ್ ಮಾಡಿ ಮುಖ ಹಾಗೂ ಕುತ್ತಿಗೆಗೆ ಹಚ್ಚಬೇಕು. 30 ನಿಮಿಷಗಳ ಬಳಿಕ ತೊಳೆಯುವುದರಿಂದ ಚರ್ಮದ ಮಂದತೆ ಕಡಿಮೆಯಾಗುತ್ತದೆ.
ಮನೆಯಲ್ಲೇ ಮಾಡುವ ಈ ನೈಸರ್ಗಿಕ ಫೇಶಿಯಲ್‌ಗಳು ಚರ್ಮಕ್ಕೆ ಯಾವುದೇ ಹಾನಿ ಮಾಡದೇ ಮೃದುವಾಗಿಸುತ್ತದೆ ಮತ್ತು ನೈಸರ್ಗಿಕ ಹೊಳಪನ್ನು ನೀಡುತ್ತದೆ. ಪಾರ್ಲರ್‌ಗೆ ಹೋಗದೇ ಖರ್ಚು ಕಡಿಮೆ ಮಾಡಿ ಸುಂದರ ತ್ವಚೆಯನ್ನು ಪಡೆಯಲು ಇದು ಅತ್ಯುತ್ತಮ ಮಾರ್ಗವಾಗಿದೆ.

