ಮೊಡವೆ (ಪಿಂಪಲ್ಸ್) ಎಂಬುದು ತ್ವಚೆಯ ಸಾಮಾನ್ಯ ಸಮಸ್ಯೆಯಾಗಿದೆ. ಇದು ಹೆಚ್ಚಾಗಿ ಯೌವನದ ಅವಧಿಯಲ್ಲಿ ಕಾಣಿಸಿಕೊಳ್ಳುತ್ತದೆ. ತ್ವಚೆಯಲ್ಲಿ ರಂಧ್ರಗಳು ಮುಚ್ಚಿಕೊಂಡಾಗ ಮೊಡವೆಗಳು ಉಂಟಾಗುತ್ತವೆ. ಈ ಸಮಸ್ಯೆಯನ್ನು ತಡೆಯಲು ಮತ್ತು ಕಡಿಮೆ ಮಾಡಿಕೊಳ್ಳಲು ನಿತ್ಯ ಜೀವನದಲ್ಲಿ ಕೆಲವೊಂದು ಸರಳ ಕ್ರಮಗಳನ್ನು ಅನುಸರಿಸಬಹುದು.
ಸ್ವಚ್ಛತೆ ಕಾಪಾಡಿ:
ಮುಖವನ್ನು ದಿನಕ್ಕೆ ಎರಡು ಬಾರಿ ಕ್ಲೆನ್ಸರ್ ಬಳಸಿ ತೊಳೆಯಿರಿ. ಇದರಿಂದ ಧೂಳು, ಕೊಳಕು ಮತ್ತು ಜಿವಾಣುಗಳು ಹೊರ ಹೋಗುತ್ತವೆ.
ಆಹಾರ ನಿಯಂತ್ರಣ:
ಎಣ್ಣೆಯುತ ಆಹಾರ, ಮಿತಿಮೀರಿದ ಸಕ್ಕರೆಯ ಸೇವನೆಯಿಂದ ದೂರವಿರಿ. ಹಣ್ಣು, ತರಕಾರಿಗಳು ಮತ್ತು ನೀರು ಹೆಚ್ಚಾಗಿ ಸೇವಿಸಿ.
ಹೆಚ್ಚು ಮೇಕಪ್ ಬಳಸಬೇಡಿ :
ಹೆಚ್ಚು ಮೇಕಪ್ ಅಥವಾ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸದಿರಿ. ಇದರಿಂದ ತ್ವಚೆಯ ರಂಧ್ರಗಳು ಮುಚ್ಚಿ ಮೊಡವೆ ಉಂಟಾಗಬಹುದು.
ನೆಮ್ಮದಿಯುಳ್ಳ ನಿದ್ರೆ:
ಪ್ರತಿದಿನ ಕನಿಷ್ಠ 7-8 ಗಂಟೆಗಳ ನಿದ್ರೆ ಮಾಡಿ. ನಿದ್ರೆಯ ಕೊರತೆ ತ್ವಚೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಮನೆಮದ್ದುಗಳನ್ನು ಉಪಯೋಗಿಸಿ:
ಅಲೋವೆರಾ ಜೆಲ್, ನಿಂಬೆಹಣ್ಣಿನ ರಸ ಅಥವಾ ತುಳಸಿ ರಸವನ್ನು ಮೊಡವೆ ಮೇಲೆ ಲೇಪನೆ ಮಾಡಿದರೆ ಉತ್ತಮ.