ಪ್ರಾಚೀನ ಕಾಲದಿಂದಲೂ, ಮಹಿಳೆಯರು ತಮ್ಮ ಸೌಂದರ್ಯಕ್ಕೆ ನಿರ್ದಿಷ್ಟ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಸೌಂದರ್ಯವರ್ಧಕಗಳನ್ನು ಬಳಸಿಕೊಂಡು ಹೆಚ್ಚು ಸುಂದರವಾಗಿರಲು ಬಯಸುತ್ತೇವೆ.
ಹಣ್ಣಿನ ಫೇಸ್ ಪ್ಯಾಕ್ ಮನೆಯಲ್ಲಿ ತಯಾರಿಸಿ ನಿಮ್ಮ ಚರ್ಮವನ್ನು ಹೇಗೆ ಸುಂದರಗೊಳಿಸಬೇಕೆಂದು ನಿಮಗೆ ತಿಳಿದಿರಬಹುದು. ಆದರೆ, ಸುಲಭವಾಗಿ ಸಿಗುವ ಹೂವುಗಳಿಂದಲೂ ಫೇಸ್ ಮಾಸ್ಕ್ ತಯಾರಿಸಬಹುದು.
ಎರಡು ದಾಸವಾಳದ ದಳಗಳನ್ನು ಎರಡು ಚಮಚ ಮೊಸರಿನೊಂದಿಗೆ ಬೆರೆಸಿ, ಅವುಗಳನ್ನು 4-5 ಹನಿ ನಿಂಬೆ ರಸದೊಂದಿಗೆ ಮಿಕ್ಸ್ ಮಾಡಿ ಮತ್ತು ನಿಮ್ಮ ಮುಖದ ಮೇಲೆ ಹಚ್ಚಿ. 20 ನಿಮಿಷಗಳ ನಂತರ ನಿಮ್ಮ ಮುಖವನ್ನು ತೊಳೆಯುವುದು ಬೇಸಿಗೆಯ ಬಿಸಿಲಿನಿಂದ ಹಾನಿಗೊಳಗಾದ ಚರ್ಮಕ್ಕೆ ಪರಿಪೂರ್ಣ ಆರೈಕೆಯಾಗಿದೆ.
ಗುಲಾಬಿ ದಳಗಳನ್ನು ಬೇರ್ಪಡಿಸಿ ಮತ್ತು ಸುಮಾರು 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ. ಒಂದು ಚಮಚ ಜೇನುತುಪ್ಪ ಸೇರಿಸಿ ರುಬ್ಬಿ ಮುಖಕ್ಕೆ ಹಚ್ಚಿ 30 ನಿಮಿಷದ ನಂತರ ತೊಳೆದರೆ ಮುಖ ಹೂವಿನಂತೆ ಅರಳುತ್ತದೆ.