ಹೊಳೆಯುವ ಮುಖ ಕಾಂತಿ ನಮ್ಮದಾಗಬೇಕು ಅಂತ ಎಲ್ಲರೂ ಬಯಸ್ತಾರೆ. ದುಡ್ಡು ಸುರಿಯುವ ಬದಲು ನಿಮ್ಮ ಅಡುಗೆ ಮನೆಯಲ್ಲಿರೋ ಅಡುಗೆ ಸೋಡಾವನ್ನು ಸರಿಯಾಗಿ ಬಳಸಿ ನೋಡಿ.
ಅಡುಗೆ ಸೋಡಾವನ್ನು ಬಳಸುವ ರೀತಿ ತಪ್ಪಾದ್ರೆ ಅದು ನಿಮ್ಮ ಚರ್ಮವನ್ನು ಶುಷ್ಕವಾಗಿಸುತ್ತದೆ. ಹಾಗಾಗಿ ಅದನ್ನು ಬಳಸುವ ಮೊದಲು ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕು.
ಒಂದು ಬೌಲ್‌ನಲ್ಲಿ 2 ಚಮಚ ಅಡುಗೆ ಸೋಡಾ ತೆಗೆದುಕೊಳ್ಳಿ. ಅದಕ್ಕೆ ನೀರು ಬೆರೆಸಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ನಿಮ್ಮ ಮುಖದ ಮೇಲಿರುವ ಮೊಡವೆಗಳ ಗುರುತಿನ ಮೇಲೆ ಅದನ್ನು ಹಚ್ಚಿ. ಫೇಸ್ ಮಾಸ್ಕ್ ನಂತೆ ಹಚ್ಚಬೇಡಿ. 10 ನಿಮಿಷಗಳ ಕಾಲ ಹಾಗೇ ಬಿಡಿ ನಂತರ ನೀರಿನಿಂದ ತೊಳೆಯಿರಿ.