ಬೆಳಗಿನ ಸಮಯವು ಚರ್ಮದ ಆರೈಕೆಯಲ್ಲಿ ಬಹಳ ಮಹತ್ವದ್ದಾಗಿದೆ. ನಿದ್ರೆಯ ಸಮಯದಲ್ಲಿ ಮುಖದಲ್ಲಿ ಬೆವರು, ಎಣ್ಣೆ ಮತ್ತು ಧೂಳು ಸೇರುತ್ತದೆ. ಇವುಗಳನ್ನು ಸರಿಯಾಗಿ ತೆಗೆದುಹಾಕದೇ ಇದ್ದರೆ, ಚರ್ಮದಲ್ಲಿ ಕಲೆ, ಮಂದತನ ಮತ್ತು ಮೊಡವೆಗಳ ಸಮಸ್ಯೆ ಉಂಟಾಗಬಹುದು. ಕೇವಲ ನೀರಿನಿಂದ ಮುಖ ತೊಳೆಯುವುದರಿಂದ ಸಾಕಾಗುವುದಿಲ್ಲ. ಕೆಲವು ನೈಸರ್ಗಿಕ ಪದಾರ್ಥಗಳು ಬೆಳಿಗ್ಗೆ ಮುಖ ತೊಳೆಯಲು ಬಳಸಿದರೆ, ಚರ್ಮ ತಾಜಾ ಮತ್ತು ಹೊಳೆಯುವಂತಾಗುತ್ತದೆ.
ತಣ್ಣೀರು
ಬೆಳಿಗ್ಗೆ ತಣ್ಣೀರಿನಿಂದ ಮುಖ ತೊಳೆಯುವುದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇದರಿಂದ ಚರ್ಮ ತಾಜಾ ಕಾಣುತ್ತದೆ ಮತ್ತು ಊತ ಕಡಿಮೆಯಾಗುತ್ತದೆ.

ರೋಸ್ ವಾಟರ್
ರೋಸ್ ವಾಟರ್‌ಗೆ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿವಾರಕ ಗುಣಗಳಿವೆ. ಇದು ಚರ್ಮವನ್ನು ಶಮನಗೊಳಿಸಿ ತೇವಗೊಳಿಸುತ್ತದೆ. ಇದರಿಂದ ನೈಸರ್ಗಿಕ ಹೊಳಪು ಬರುತ್ತದೆ.
ಹನಿ ವಾಶ್
ಜೇನುತುಪ್ಪ ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ಬೆಳಗ್ಗೆ ಜೇನುತುಪ್ಪ ಹಚ್ಚಿ ಮುಖ ತೊಳೆದರೆ ಚರ್ಮದ ಕಲ್ಮಶಗಳು ದೂರವಾಗುತ್ತವೆ. ಇದರಿಂದ ಚರ್ಮ ಮೃದು ಮತ್ತು ಹೊಳೆಯುವಂತಾಗುತ್ತದೆ.

ಸೌತೆಕಾಯಿ ರಸ
ಸೌತೆಕಾಯಿ ರಸವು ಚರ್ಮಕ್ಕೆ ತಂಪು ನೀಡುತ್ತದೆ ಮತ್ತು ಹೈಡ್ರೇಶನ್ ಒದಗಿಸುತ್ತದೆ. ಇದು ರಂಧ್ರಗಳನ್ನು ಬಿಗಿಗೊಳಿಸಿ ಮಂದತೆಯನ್ನು ಕಡಿಮೆ ಮಾಡುತ್ತದೆ.
ಅಲೋವೆರಾ ಜೆಲ್
ಅಲೋವೆರಾ ಜೆಲ್‌ನಲ್ಲಿ ಜೀವಸತ್ವಗಳು ಮತ್ತು ಖನಿಜಗಳಿದ್ದು, ಚರ್ಮವನ್ನು ಶಮನಗೊಳಿಸಿ ತೇವಗೊಳಿಸುತ್ತದೆ. ಬೆಳಿಗ್ಗೆ ಬಳಸಿದರೆ ನೈಸರ್ಗಿಕ ಹೊಳಪು ನೀಡುತ್ತದೆ.

ಹಾಲು
ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು, ಸತ್ತ ಚರ್ಮವನ್ನು ತೆಗೆಯಲು ಸಹಕಾರಿ. ಇದರಿಂದ ಚರ್ಮ ಮೃದು ಮತ್ತು ಕಾಂತಿಯುತವಾಗುತ್ತದೆ.
ನಿಂಬೆ ರಸ
ನಿಂಬೆ ರಸ ವಿಟಮಿನ್ ಸಿ ಸಮೃದ್ಧವಾಗಿದ್ದು, ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ನೀರಿನೊಂದಿಗೆ ಬೆರೆಸಿ ಬಳಸಿದರೆ ಚರ್ಮದಲ್ಲಿ ತಕ್ಷಣ ಹೊಳಪು ತರಬಹುದು.
