ಮಾನವ ದೇಹದ ಸರಿಯಾದ ಕಾರ್ಯಪ್ರವೃತ್ತಿಗೆ ನಿದ್ರೆ ಬಹಳ ಮುಖ್ಯ. ಹೇಗೆ ಸಮತೋಲಿತ ಆಹಾರ ಮತ್ತು ವ್ಯಾಯಾಮ ನಮ್ಮ ಆರೋಗ್ಯಕ್ಕೆ ಅಗತ್ಯವೋ, ಹಾಗೆಯೇ ಗುಣಮಟ್ಟದ ನಿದ್ರೆ ಕೂಡ ಮುಖ್ಯ. ಆದರೆ ಇಂದಿನ ಜೀವನಶೈಲಿಯಲ್ಲಿ ಕೆಲವರು ತುಂಬಾ ಕಡಿಮೆ ನಿದ್ರೆ ಮಾಡುತ್ತಾರೆ, ಮತ್ತಷ್ಟು ಮಂದಿ ಅತಿಯಾದ ನಿದ್ರೆಗೆ ಒಳಗಾಗುತ್ತಾರೆ. ಇವೆರಡೂ ದೇಹಕ್ಕೆ ಹಾನಿಕಾರಕವಾಗಿದ್ದು, ಅನೇಕ ರೋಗಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ನಿದ್ರೆಯ ಕೊರತೆಯಿಂದ ಉಂಟಾಗುವ ಸಮಸ್ಯೆಗಳು
ಪ್ರತಿ ರಾತ್ರಿ 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದರೆ ಆಯಾಸ, ಕಡಿಮೆ ಏಕಾಗ್ರತೆ, ಕಿರಿಕಿರಿ ಹೆಚ್ಚಾಗುತ್ತದೆ.
ಹೃದಯಾಘಾತ, ಪಾರ್ಶ್ವವಾಯು, ಮಧುಮೇಹ, ಖಿನ್ನತೆ ಮತ್ತು ಅಕಾಲಿಕ ಮರಣದ ಅಪಾಯ ಹೆಚ್ಚುತ್ತದೆ.
ರೋಗನಿರೋಧಕ ಶಕ್ತಿ ಕುಸಿದು ದೇಹವು ಸೋಂಕುಗಳಿಗೆ ಬಲಿಯಾಗುತ್ತದೆ.

ಅತಿಯಾದ ನಿದ್ರೆಯ ಪರಿಣಾಮ
ದಿನಕ್ಕೆ 9 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಿದರೆ ಸಾವಿನ ಅಪಾಯ ಶೇಕಡಾ 34ರಷ್ಟು ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.
ಹೆಚ್ಚು ನಿದ್ರೆ ಮಾಡುವವರಲ್ಲಿ ಟೈಪ್ 2 ಮಧುಮೇಹ, ಬೊಜ್ಜು, ಖಿನ್ನತೆ ಮತ್ತು ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ.
ಹೆಚ್ಚಿನ ಸಮಯ ಮಲಗಿದರೂ ಆಯಾಸವಾಗಿದ್ದರೆ ಅದು ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು.

ಉತ್ತಮ ನಿದ್ರೆಗಾಗಿ ಮಾಡಬೇಕಾದ ಕ್ರಮಗಳು
ಪ್ರತಿದಿನ ಸರಿಯಾದ ಸಮಯದಲ್ಲಿ ಮಲಗಿ, ಸರಿಯಾದ ಸಮಯದಲ್ಲಿ ಎಚ್ಚರವಾಗುವುದು.
ಮಲಗುವ ಮೊದಲು ಮೊಬೈಲ್, ಟಿವಿ ಮುಂತಾದ ಪರದೆಗಳ ಬಳಕೆಯನ್ನು ತಪ್ಪಿಸುವುದು.
ಮಲಗುವ ಕೋಣೆ ತಂಪಾಗಿಯೂ ಆರಾಮದಾಯಕವಾಗಿಯೂ ಇರಬೇಕು.
ಪ್ರತಿದಿನ ವ್ಯಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು.
ಮಲಗುವ ಮೊದಲು ಪುಸ್ತಕ ಓದುವುದು ಅಥವಾ ಮೃದುವಾದ ಸಂಗೀತ ಕೇಳುವುದರಿಂದ ಮನಸ್ಸು ಶಾಂತವಾಗುತ್ತದೆ.
ನಿದ್ರೆ ನಮ್ಮ ದೇಹದ ನೈಸರ್ಗಿಕ ಚಿಕಿತ್ಸೆ. ಕಡಿಮೆ ನಿದ್ರೆ ಮಾಡುವುದು ಮತ್ತು ಅತಿಯಾದ ನಿದ್ರೆ ಎರಡೂ ಆರೋಗ್ಯದ ಶತ್ರುಗಳು. ಪ್ರತಿದಿನ ಸರಾಸರಿ 7 ರಿಂದ 8 ಗಂಟೆಗಳ ನಿದ್ರೆ ಮಾಡಿದರೆ ದೇಹ-ಮನಸ್ಸು ಸಮತೋಲನದಲ್ಲಿರುತ್ತದೆ. ಅತಿಯಾದ ನಿದ್ರೆ ಅಥವಾ ನಿರಂತರ ನಿದ್ರಾಹೀನತೆಯ ಸಮಸ್ಯೆ ಎದುರಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯುತ್ತಮ.