ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಅಡುಗೆ ಮಾಡುವಾಗ ಸ್ವಲ್ಪ ಯಾಮಾರಿದ್ರೂ ಸಾಕು. ಅಡುಗೆ ಸೀದುಹೋಗಿ ಪಾತ್ರೆ ತಳ ಹಿಡಿದಿರುತ್ತೆ. ತಳ ಹಿಡಿದ ಪಾತ್ರೆ ಕ್ಲೀನ್ ಮಾಡುವುದಿದೆಯಲ್ಲಾ..ಪರರಿಗೂ ಬೇಡ ಕಷ್ಟ ಅನಿಸುತ್ತೆ. ಆದರೆ, ನಾವೀಗ ಹೇಳೋ ಕೆಲ ಟಿಪ್ಸ್ ಫಾಲೋ ಮಾಡಿದ್ರೆ ಸುಲಭವಾಗಿ ತಳ ಹಿಡಿದ ಪಾತ್ರೆಯನ್ನು ಶುಭ್ರಮಾಡಬಹುದು.
- ತಳ ಹಿಡಿದ ಪಾತ್ರೆಯಲ್ಲಿ ಒಂದು ಲೀಟರ್ ನೀರು ಹಾಕಿ ಕುದಿಸಿ. ಇದು ತಳದಲ್ಲಿ ಗಟ್ಟಿಯಾಗಿ ಅಂಟಿಕೊಂಡ ಆಹಾರವನ್ನು ಬಿಡುತ್ತದೆ. ಬಳಿಕ ಸ್ಕ್ರಬ್ ನಿಂದ ತಿಕ್ಕಿ ತೊಳೆಯಿರಿ.
- ಉಪ್ಪು ರುಚಿಗಷ್ಟೇ ಅಲ್ಲ, ಪಾತ್ರೆಗಳ ಕಲೆಯನ್ನು ದೂರಮಾಡುತ್ತದೆ. ತಳ ಹಿಡಿದ ಪಾತ್ರೆಗೆ ಅರ್ಧ ಹಿಡಿ ಉಪ್ಪು ಹಾಗೂ ನಿಂಬೆ ರಸ ಹಿಂಡಿ ಅರ್ಧ ಗಂಟೆ ಪಕ್ಕಕ್ಕಿಡಿ. ಸ್ವಲ್ಪ ಹೊತ್ತಿನ ಬಳಿಕ ತಿಕ್ಕಿದರೆ ಕಲೆ ದೂರವಾಗುತ್ತದೆ.
- ನೀರಿಗೆ ಸ್ವಲ್ಪ ಅಡುಗೆ ಸೋಡಾ ಮಿಕ್ಸ್ ಮಾಡಿ ತಳ ಹಿಡಿದ ಪಾತ್ರೆಗೆ ಹಾಕಿ ಹತ್ತು ನಿಮಿಷ ಕುದಿಸಿ. ಇದರಿಂದಲೂ ಕಲೆಗಳು ದೂರವಾಗುತ್ತವೆ.