ಸ್ಮೋಕ್ ಬಾಂಬ್: ತನಿಖೆಗೆ 50 ತಂಡ, ಕರ್ನಾಟಕ ಸಹಿತ ಆರು ರಾಜ್ಯಗಳಲ್ಲಿ ವಿಶೇಷ ಸೆಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶವನ್ನೇ ಬೆಚ್ಚಿಬೀಳಿಸಿರುವ ಸಂಸತ್ ಸ್ಮೋಕ್ ಬಾಂಬ್ ಘಟನೆಗೆ ಸಂಬಂಧಿಸಿ ತನಿಖೆ ಇನ್ನಷ್ಟು ಚುರುಕಾಗಿದ್ದು, ಕರ್ನಾಟಕ ಸಹಿತ ಆರು ರಾಜ್ಯಗಳಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್ (ಘಟಕ) ರಚಿಸಲಾಗಿದೆ.
ಕರ್ನಾಟಕ, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರದಲ್ಲಿ ಈ ಸೆಲ್ ರಚನೆಯಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಆರಂಭವಾಗಿದೆ.

ಈ ನಡುವೆ ತನಿಖೆಗೆ ಸಹಕಾರಿಯಾಗುವಂತೆ ಪ್ರತ್ಯೇಕ ಐವತ್ತು ತಂಡಗಳನ್ನು ಕೂಡಾ ರಚಿಸಲಾಗಿದೆ. ಆರೋಪಿಗಳ ಡಿಜಿಟಲ್ ಬಳಕೆ, ಬ್ಯಾಂಕಿಂಗ್ ವಹಿವಾಟು, ಪೂರ್ವಾಪರ ಹಿನ್ನೆಲೆಯ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ವಿಶೇಷ ಸೆಲ್‌ನ ಅಧಿಕಾರಿಗಳು ಈ ಆರೋಪಿಗಳನ್ನು ಎಲ್ಲಾ ಆರೂ ರಾಜ್ಯಗಳಿಗೆ ಕರೆದೊಯ್ದು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!