ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ನಲ್ಲಿ ಸ್ಮೋಕ್ ಬಾಂಬ್ ಸಿಡಿಸಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದ್ದು, ಮೈಸೂರು ಬಿಟ್ಟು ಹೊರಗಡೆ ತೆರಳದಂತೆ ಮನೋರಂಜನ್ ಕುಟುಂಬಕ್ಕೆ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಮನೆಗೆ ಯಾವ ಸಂಬಂಧಿಕರೂ ಬಾರದಂತೆ ಸೂಚನೆ ನೀಡಿ, ಅನಾಮಾಧೇಯ ಕರೆಗಳ ಬಗ್ಗೆ ಮಾಹಿತಿ ನೀಡಬೇಕು. ನಮ್ಮ ಸೂಚನೆ ಬರುವವರೆಗೂ ಮೈಸೂರಿನಿಂದ ಹೊರಗಡೆ ತೆರಳಬಾರದು, ತೀರಾ ತುರ್ತು ಪರಿಸ್ಥಿತಿ ಇದ್ದರೆ ನಮ್ಮ ಗಮನಕ್ಕೆ ತಂದು ಅನುಮತಿ ಪಡೆದ ಬಳಿಕ ತೆರಳಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಜೊತೆಗೆ ನಮ್ಮ ಸೂಚನೆ ಬರುವವರೆಗೂ ಯಾವುದೇ ಪತ್ರಿಕೆ, ಹಳೇ ಪುಸ್ತಕ ಇದ್ಯಾವುದನ್ನ ಮಾರಕೂಡದು ಎಂದು ಕೂಡಾ ಮನೋರಂಜನ್ ಪೋಷಕರಿಗೆ ಗುಪ್ತಚರ ಇಲಾಖೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ