ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಮೀಸಲಾತಿ ಮಸೂದೆ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದು, ಕಾಂಗ್ರೆಸ್ ಪರವಾಗಿ ಸೋನಿಯಾ ಗಾಂಧಿ 10 ನಿಮಿಷಗಳ ಕಾಲ ಮಾತನಾಡಿದರು. ಚರ್ಚೆಯ ವೇಳೆ ಟಿಎಂಸಿ ಸಂಸದ ಮಹುವಾ ಮೊಯಿತ್ರಾ ಮುಸ್ಲಿಂ ಮಹಿಳೆಯರಿಗೂ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಬಳಿಕ ಈ ಕುರಿತು ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು,ಮಹುವಾ ಮೊಯಿತ್ರಾ ಅವರ ಹೆಸರನ್ನು ಉಲ್ಲೇಖಿಸದೆ ಮುಸ್ಲಿಂ ಮೀಸಲಾತಿಗೆ ಬೇಕು ಎಂದು ಒತ್ತಾಯಿಸುವವರಿಗೆ ಈ ಮಾತನ್ನು ಹೇಳಲು ಬಯಸುತ್ತೇನೆ, ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ಸಂವಿಧಾನದಲ್ಲಿ ನಿಷೇಧಿಸಲಾಗಿದೆ. ಪ್ರತಿಪಕ್ಷಗಳು ನಿಮ್ಮನ್ನು ಗೊಂದಲಗೊಳಿಸಲು ಪ್ರಯತ್ನಿಸುತ್ತಿರುವ ರೀತಿಯಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ ಎಂದು ತಿರುಗೇಟು ನೀಡಿದ್ದಾರೆ.
ಸೋನಿಯಾ ಗಾಂಧಿ, ತಕ್ಷಣ ಜಾರಿಗೊಳಿಸಿ, ಎಸ್ಪಿ-ಎನ್ಸಿಪಿ ಕೂಡ ಒಬಿಸಿ ಮಹಿಳೆಯರಿಗೆ ಮೀಸಲಾತಿಯನ್ನು ಒತ್ತಾಯಿಸುತ್ತದೆ. ಡಿಲಿಮಿಟೇಶನ್ ಪ್ರಕ್ರಿಯೆ ಆಗುವವರೆಗೂ ಸರ್ಕಾರ ಇದಕ್ಕೆ ಕಾಯಬಾರದು. ಇದಕ್ಕೂ ಮುನ್ನ ಜಾತಿ ಗಣತಿ ನಡೆಸುವ ಮೂಲಕ ಈ ಮಸೂದೆಯಲ್ಲಿ ಎಸ್ಸಿ-ಎಸ್ಟಿ ಮತ್ತು ಒಬಿಸಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು’ ಎಂದು ಹೇಳಿದರು.
ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ಮತ್ತು ಎಸ್ಪಿ ಸಂಸದ ಡಿಂಪಲ್ ಯಾದವ್ ಮಾತನಾಡಿ, ಸರ್ಕಾರವು ಹೃದಯವಂತಿಕೆ ವಹಿಸಿ ಮಸೂದೆಯಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು. ಒಬಿಸಿ ಮತ್ತು ಅಲ್ಪಸಂಖ್ಯಾತ ಮಹಿಳೆಯರಿಗೂ ಮಸೂದೆಯಲ್ಲಿ ಮೀಸಲಾತಿ ನೀಡಬೇಕು ಎಂದು ಹೇಳಿದರು.