Tuesday, November 25, 2025

ಅದ್ಧೂರಿಯಾಗಿ ನೆರವೇರಿದ ಸ್ಮೃತಿ ಮಂಧಾನ ಹಳದಿ ಶಾಸ್ತ್ರ! ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಮದುವೆ ಸಂಭ್ರಮ ಶುರುವಾಗಿದೆ. ಶುಕ್ರವಾರ ತಮ್ಮ ಕ್ರಿಕೆಟ್ ತಂಡದ ಸದಸ್ಯರೊಂದಿಗೆ ಹಳದಿ ಸಮಾರಂಭವನ್ನು ಆಚರಿಸಿಕೊಂಡರು.

ಮಂಧನಾ ನವೆಂಬರ್ 23 ರಂದು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರನ್ನು ಇಂದೋರ್​ನಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ಟೀಮ್ ಇಂಡಿಯಾದ ಸ್ಟಾರ್ ಇತ್ತೀಚೆಗೆ ಮಹಿಳಾ ಏಕದಿನ ವಿಶ್ವಕಪ್ ಗೆದ್ದಿದ್ದರು. ಇದು ಮುಗಿದ ಕೂಡಲೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ರಿಚಾ ಘೋಷ್, ಶ್ರೇಯಾಂಕ ಪಾಟೀಲ್, ರೇಣುಕಾ ಸಿಂಗ್, ಶಿವಾಲಿ ಶಿಂಧೆ, ರಾಧಾ ಯಾದವ್ ಮತ್ತು ಜೆಮಿಮಾ ರೊಡ್ರಿಗಸ್ ಸೇರಿದಂತೆ ಹಲವಾರು ಆಟಗಾರ್ತಿಯರು ಸ್ಮೃತಿ ಮಂಧಾನ ಅವರ ಹಳದಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಜೆಮಿಮಾ ಹೊರತುಪಡಿಸಿ, ಎಲ್ಲರೂ ಹೊಳೆಯುವ ಹಳದಿ ಬಣ್ಣದ ಬಟ್ಟೆ ಧರಿಸಿ ವಧು (ಸ್ಮೃತಿ) ಜೊತೆ ನೃತ್ಯ ಮಹಡಿಯಲ್ಲಿ ಸಂಭ್ರಮಿಸಿದರು. ಹಳದಿ ಸಮಾರಂಭದಲ್ಲಿ ಭಾರತೀಯ ಮಹಿಳಾ ಕ್ರಿಕೆಟಿಗರು ಸ್ಮೃತಿ ಮಂಧಾನ ಅವರೊಂದಿಗೆ ನೃತ್ಯ ಮಾಡುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಸ್ಮೃತಿ ಮತ್ತು ಪಲಾಶ್ ಅವರ ವಿವಾಹವು ಅದ್ಧೂರಿಯಾಗಿ ನಡೆಯಲಿದೆ ಎಂದು ಹೇಳಲಾಗಿದೆ. ಈ ಜೋಡಿ ಸಾಮಾಜಿಕ ಮಾಧ್ಯಮದಲ್ಲಿ ಹೃದಯಸ್ಪರ್ಶಿ ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ, ಪಲಾಶ್ ಮುಚ್ಚಲ್ ಇನ್​ಸ್ಟಾಗ್ರಾಮ್​ನಲ್ಲಿ ಸ್ಮೃತಿಯನ್ನು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣಕ್ಕೆ ಕರೆದೊಯ್ದು ಅವರ ಪ್ರಪೋಸ್ ಮಾಡಿದರು. ಪಲಾಶ್ ಮುಚ್ಚಲ್ ಸ್ಮೃತಿಯ ಬೆರಳಿಗೆ ವಜ್ರದ ಉಂಗುರವನ್ನು ಹಾಕಿದರು. 

error: Content is protected !!