ಯುನೆಸ್ಕೋ ಪ್ರಿಕ್ಸ್ ವರ್ಸೈಲ್ಸ್ ಪ್ರಶಸ್ತಿಗೆ ‘ಸ್ಮೃತಿವನ ಮ್ಯೂಸಿಯಂ’ ಆಯ್ಕೆ: ಪ್ರಧಾನಿ ಮೋದಿ ಸಂತಸ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪ್ರತಿಷ್ಠಿತ ಯುನೆಸ್ಕೋ ಪ್ರಿಕ್ಸ್ ವರ್ಸೈಲ್ಸ್ ಪ್ರಶಸ್ತಿಗೆ ಗುಜರಾತ್​ನ ಭುಜ್ ಜಿಲ್ಲೆಯ ಕಛ್​ನಲ್ಲಿರುವ ‘ಸ್ಮೃತಿವನ ವನ್ನು ಆಯ್ಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಛ್ ಪ್ರದೇಶದಲ್ಲಿ 2001ರಲ್ಲಿ ಭೂಕಂಪ ಸಂಭವಿಸಿತ್ತು. ಭೂಕಂಪದ ಅನಾಹುತಗಳನ್ನು ಜನರು ಧೈರ್ಯವಾಗಿ ಎದುರಿಸಿ ಚೇತರಿಸಿಕೊಂಡಿದ್ದನ್ನು ಸ್ಮರಿಸಲೆಂದು ನರೇಂದ್ರ ಮೋದಿ ಅವರು 2022 ಆಗಸ್ಟ್ 28 (ಭಾನುವಾರ) ರಂದು ‘ಸ್ಮೃತಿವನ’ವನ್ನು ಲೋಕಾರ್ಪಣೆ ಮಾಡಿದ್ದರು.

ಕಚ್‌ನಲ್ಲಿರುವ ‘ಸ್ಮೃತಿವನ್’ 2001 ರ ಭೂಕಂಪದಲ್ಲಿ ನಾವು ಕಳೆದುಕೊಂಡವರ ಗೌರವಾರ್ಥವಾಗಿ ಹಾಗೂ ಆ ಅನಾಹುತಗಳನ್ನು ಜನರು ಧೈರ್ಯವಾಗಿ ಎದುರಿಸಿ ಚೇತರಿಸಿಕೊಂಡಿದ್ದನ್ನು ನೆನಪಿಸುತ್ತದೆ. ಈ ವಸ್ತುಸಂಗ್ರಹಾಲಯವು ಪ್ರಿಕ್ಸ್ ವರ್ಸೈಲ್ಸ್ ಮ್ಯೂಸಿಯಂಸ್ 2024 ರ ವಿಶ್ವ ಆಯ್ಕೆಯಲ್ಲಿ ಸ್ಥಾನವನ್ನು ಕಂಡುಕೊಂಡಿರುವುದು ಸಂತೋಷವಾಗಿದೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://x.com/PrixVersailles/status/1801283608302203075/photo/1

ಸ್ಮೃತಿವನ ಸ್ಮಾರಕ 470 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದು, ಇದರಲ್ಲಿ ಭೂಕಂಪದಲ್ಲಿ ಜೀವ ಕಳೆದುಕೊಂಡ 13,000 ಜನರ ಹೆಸರುಗಳನ್ನು ಕೆತ್ತಲಾಗಿದೆ.

ಸ್ಮೃತಿವನ ಸ್ಮಾರಕದಲ್ಲಿ ಸ್ಮೃತಿವನ ಭೂಕಂಪ ವಸ್ತುಸಂಗ್ರಹಾಲಯವೂ ಇದೆ. ಏಳು ಹಂತಗಳಲ್ಲಿ ಹರಡಿಕೊಂಡಿರುವ ವಸ್ತುಸಂಗ್ರಹಾಲಯವು ರಿಬರ್ತ್​ (ಮರುಜನ್ಮ), ಮರು ಹುಡುಕಾಟ (ರಿಡಿಸ್ಕವರ್), ರಿಸ್ಟೋರ್ (ಸರಿಪಡಿಸು), ಮತ್ತೆ ಕಟ್ಟು (ರಿಬಿಲ್ಡ್), ಮತ್ತೆ ಯೋಚಿಸು (ರಿಥಿಂಕ್), ಮತ್ತೆ ಜೀವಿಸು (ರಿಲೀವ್), ಮತ್ತೆ ಹೊಸದಾಗಿ ಬಳಸು (ರಿನ್ಯು) ಎಂಬ ಏಳು ಆಶಯಗಳನ್ನು (ಥೀಂ) ಹೊಂದಿದೆ.

ಮೊದಲ ಹಂತವು ಭೂಮಿಯ ವಿಕಸನ ಮತ್ತು ಪ್ರತಿ ಸವಾಲನ್ನು ಗೆದ್ದ ಕುರಿತು ವಿವರಿಸಿದೆ.ಎರಡನೇ ಹಂತವು ‘ಮರು ಹುಡುಕಾಟ’ದ ಆಶಯ ಹೊಂದಿದೆ. ಗುಜರಾತ್​ನ ಭೌಗೋಳಿಕ ಮೇಲ್ಮೈ ಮತ್ತು ರಾಜ್ಯಕ್ಕಿರುವ ನೈಸರ್ಗಿಕ ಸವಾಲುಗಳನ್ನು ವಿವರಿಸುತ್ತದೆ.3ನೇ ಹಂತವು ಭೂಕಂಪದ ನಂತರ ತಕ್ಷಣಕ್ಕೆ ಏನಾಯಿತು ಎನ್ನುವುದನ್ನು ಕಟ್ಟಿಕೊಡುತ್ತದೆ. ನೂರಾರು ವ್ಯಕ್ತಿಗಳು, ಸಂಘ ಸಂಸ್ಥೆಗಳಿಂದ ಸಂಗ್ರಹಿಸಿರುವ ಛಾಯಾಚಿತ್ರಗಳನ್ನು ಒಪ್ಪಗೊಳಿಸಿ ಪ್ರದರ್ಶಿಸಲಾಗಿದೆ.4ನೇ ಹಂತವು 2001ರ ಭೂಕಂಪದ ನಂತರ ನಡೆದ ಗುಜರಾತ್​ನ ಮರುನಿರ್ಮಾಣ ಪ್ರಕ್ರಿಯೆಯನ್ನು ವಿವರಿಸುತ್ತದೆ.5ನೇ ಹಂತವು ಮರು ನಿರ್ಮಾಣ ಚಟುವಟಿಕೆಗಳ ಬಗ್ಗೆ ಗಮನ ಸೆಳೆಯುತ್ತದೆ. ವಿವಿಧ ರೀತಿಯ ನೈಸರ್ಗಿಕ ದುರಂತಗಳು ಮತ್ತು ಭವಿಷ್ಯಕ್ಕಾಗಿ ಮಾಡಿಕೊಳ್ಳಬೇಕಾದ ಸಿದ್ಧತೆಯ ಬಗ್ಗೆ ಗಮನ ಸೆಳೆಯುತ್ತದೆ. 6ನೇ ಬ್ಲಾಕ್​ನಲ್ಲಿ 5ಡಿ ಸಿಮ್ಯುಲೇಟರ್ ಇದ್ದು, ಇಲ್ಲಿಗೆ ಭೇಟಿ ಕೊಡುವವರು ಭೂಕಂಪದ ಆಘಾತ ಮತ್ತು ಅನಾಹುಗಳ ತೀವ್ರತೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ.7ನೇ ಬ್ಲಾಕ್​ನಲ್ಲಿ ಜನರು ಭೂಕಂಪದಲ್ಲಿ ಮೃತಪಟ್ಟವರನ್ನು ಮತ್ತೆ ನೆನಪಿಸಿಕೊಂಡು, ಶ್ರದ್ಧಾಂಜಲಿ ಸಲ್ಲಿಸಲು ಅವಕಾಶವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!