ಸಂಜೆ ಹೊತ್ತಿಗೆ ಏನಾದರೂ ಬಿಸಿ ಬಿಸಿ, ಟೇಸ್ಟಿ ಮತ್ತು ಬೇಗ ತಯಾರಾಗೋ ಸ್ನ್ಯಾಕ್ ಬೇಕಾ? ಹಾಗಿದ್ದರೆ ಈ ಸ್ಪೆಷಲ್ ವೆಜಿ ಮ್ಯಾಗಿ ಒಮ್ಮೆ ಟ್ರೈ ಮಾಡಿ. ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ ಈ ರೆಸಿಪಿ ಕೇವಲ ಕೆಲವೇ ನಿಮಿಷಗಳಲ್ಲಿ ರೆಡಿ ಆಗುತ್ತದೆ. ಮ್ಯಾಗಿಗೆ ತರಕಾರಿಗಳ ಟಚ್ ಕೊಟ್ಟರೆ ರುಚಿ ಮಾತ್ರವಲ್ಲ, ಆರೋಗ್ಯಕರವೂ ಆಗುತ್ತದೆ.
ಬೇಕಾಗುವ ಪದಾರ್ಥಗಳು:
ಮ್ಯಾಗಿ – 1 ಪ್ಯಾಕೆಟ್
ಈರುಳ್ಳಿ – 1 ಸಣ್ಣದು
ಕ್ಯಾರೆಟ್ – 2 ಟೇಬಲ್ ಸ್ಪೂನ್ (ಚಿಕ್ಕ ತುಂಡುಗಳು)
ಕ್ಯಾಪ್ಸಿಕಂ – 2 ಟೇಬಲ್ ಸ್ಪೂನ್
ಬೀನ್ಸ್ – 2 ಟೇಬಲ್ ಸ್ಪೂನ್
ಸ್ವೀಟ್ ಕಾರ್ನ್ – 2 ಟೇಬಲ್ ಸ್ಪೂನ್
ಹಸಿಮೆಣಸು – 1
ಟೊಮ್ಯಾಟೋ – 1 ಸಣ್ಣದು
ಎಣ್ಣೆ ಅಥವಾ ಬೆಣ್ಣೆ – 1 ಟೀ ಸ್ಪೂನ್
ನೀರು – 1½ ಕಪ್
ಉಪ್ಪು – ಬೇಕಾದಷ್ಟು
ಮೆಣಸಿನ ಪುಡಿ / ಪೆಪ್ಪರ್ – ಸ್ವಲ್ಪ
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಮಾಡುವ ವಿಧಾನ:
ಮೊದಲು ಒಂದು ಪ್ಯಾನ್‌ನಲ್ಲಿ ಎಣ್ಣೆ ಅಥವಾ ಬೆಣ್ಣೆ ಹಾಕಿ ಬಿಸಿ ಮಾಡಿ. ನಂತರ ಈರುಳ್ಳಿ, ಹಸಿಮೆಣಸು ಹಾಕಿ ಸ್ವಲ್ಪ ಫ್ರೈ ಮಾಡಿ. ಈಗ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ, ಕಾರ್ನ್ ಮತ್ತು ಟೊಮ್ಯಾಟೋ ಸೇರಿಸಿ 2–3 ನಿಮಿಷ ಚೆನ್ನಾಗಿ ತುರಿಯಿರಿ.
ನಂತರ 1½ ಕಪ್ ನೀರು ಹಾಕಿ ಕುದಿಯಲು ಬಿಡಿ. ನೀರು ಕುದಿದ ಬಳಿಕ ಮ್ಯಾಗಿ ನೂಡಲ್ಸ್ ಮತ್ತು ಅದರ ಟೇಸ್ಟ್ ಮೇಕರ್ ಸೇರಿಸಿ. ಬೇಕಿದ್ದರೆ ಸ್ವಲ್ಪ ಪೆಪ್ಪರ್ ಮತ್ತು ಉಪ್ಪು ಸೇರಿಸಿ. 2–3 ನಿಮಿಷ ಚೆನ್ನಾಗಿ ಬೇಯಿಸಿದರೆ ಬಿಸಿ ಬಿಸಿ ವೆಜಿ ಮ್ಯಾಗಿ ರೆಡಿ.
ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಸರ್ವ್ ಮಾಡಿದರೆ ಸಂಜೆ ಟೀ ಜೊತೆ ಸೂಪರ್ ಸ್ನ್ಯಾಕ್.



