ಬೇಕಾಗುವ ಸಾಮಾಗ್ರಿಗಳು : ಅಕ್ಕಿ ಹಿಟ್ಟು 1 ಕಪ್, ಮೈದಾಹಿಟ್ಟು, 2 ಚಮಚ, ಒಣ ಕೊಬ್ಬರಿ 1/4 ಕಪ್, ಹುರಿದು ಪುಡಿ ಮಾಡಿದ ನೆಲಗಡಲೆ ಪುಡಿ 2 ಚಮಚ, ಹುರಿಗಡಲೆ 2 ಚಮಚ, ಇಂಗು ಚಿಟಕಿ, ಜೀರಿಗೆ 1 ಚಮಚ, ಹಸಿ ಮೆಣಸಿನಕಾಯಿ ಪೇಸ್ಟ್ 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು.
ತಯಾರಿಸುವ ವಿಧಾನ :
ಸ್ವಲ್ಪ ತೆಂಗಿನ ತುರಿಯನ್ನು ರುಬ್ಬಿ, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ತೆಂಗಿನ ತುರಿ ಪುಡಿ, ಕಡಲೆ ಪುಡಿ, ಮೆಂತ್ಯ ಪುಡಿ, ಜೀರಿಗೆ, ಕೆಂಪು ಮೆಣಸಿನಕಾಯಿ ಮತ್ತು ಇಂಗು ಸೇರಿಸಿ, ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟಿನ ಮಿಶ್ರಣದಿಂದ ಸಣ್ಣ ಉಂಡೆಗಳನ್ನು ರೂಪಿಸಿ, ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಕಾಗದದ ಮೇಲೆ ಸ್ವಲ್ಪ ಎಣ್ಣೆ ಹಾಕಿ, ನಂತರ ಕೈಯಿಂದ ಒತ್ತಿ ಬಿಸಿ ಎಣ್ಣೆಯಲ್ಲಿ ಹಾಕಿ ಮತ್ತು ಗೋಲ್ಡನ್ ಬ್ರೌನ್ ಬರೋವರೆಗೂ ಫ್ರೈ ಮಾಡಿ. ಗರಿ ಗರಿಯಾದ ನಿಪ್ಪಟ್ಟು ಸವಿಯಲು ಸಿದ್ದ.