ಪಿಜ್ಜಾ ಅಂದ್ರೆ ಎಲ್ಲರಿಗೂ ಇಷ್ಟವಾದ ಖಾದ್ಯ. ಆದರೆ ಅದನ್ನು ತಯಾರಿಸಲು ಸಮಯ ಬೇಕು, ಅಡುಗೆ ಸಾಧನಗಳೂ ಬೇಕು ಎಂಬ ಕಾರಣಕ್ಕೆ ಮನೆಗಳಲ್ಲಿ ಹಲವರು ಅದನ್ನು ಮಾಡೋದನ್ನು ತಪ್ಪಿಸುತ್ತಾರೆ. ಆದರೆ ಬ್ರೆಡ್ ಪಿಜ್ಜಾ ಅಂದ್ರೆ ಪಿಜ್ಜಾ ರುಚಿಯನ್ನೇ ನಿಮಿಷಗಳಲ್ಲಿ ಕೊಡೋ ಒಂದು ಸಿಂಪಲ್ ಹಾಗೂ ಟೇಸ್ಟಿ ಆಯ್ಕೆ! ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟವಾಗುವ ಈ ರೆಸಿಪಿ ಈವಿನಿಂಗ್ ಸ್ನ್ಯಾಕ್‌ಗೆ ಸೂಕ್ತ.
ಬೇಕಾಗುವ ಸಾಮಗ್ರಿಗಳು:
ಬ್ರೆಡ್ – 3 ಸ್ಲೈಸ್‌ಗಳು
ಹೆಚ್ಚಿದ ಈರುಳ್ಳಿ – 2 ಚಮಚ
ಹೆಚ್ಚಿದ ಕ್ಯಾಪ್ಸಿಕಮ್ – 2 ಚಮಚ
ಚೀಸ್ – 3 ಚಮಚ
ಟೊಮೆಟೋ ಸಾಸ್ ಅಥವಾ ಪಿಜ್ಜಾ ಸಾಸ್ – 2 ಚಮಚ
ಕಾಳುಮೆಣಸಿನ ಪುಡಿ ಅಥವಾ ಇಟಾಲಿಯನ್ ಮಸಾಲೆ – 1 ಚಿಟಿಕೆ
ಚಿಲ್ಲಿ ಫ್ಲೇಕ್ಸ್ – ಸ್ವಲ್ಪ
ಕ್ಯಾರೆಟ್ – 1 ಚಮಚ
ತುಪ್ಪ ಅಥವಾ ಬೆಣ್ಣೆ – ಸ್ವಲ್ಪ
ಮಾಡುವ ವಿಧಾನ:
ಮೊದಲು ಬ್ರೆಡ್ ಸ್ಲೈಸ್‌ನ ಒಂದು ಸೈಡಿಗೆ ಟೊಮೆಟೋ ಸಾಸ್ ಸವರಿ. ಅದರ ಮೇಲೆ ಹೆಚ್ಚಿದ ಈರುಳ್ಳಿ ಹಾಗೂ ಕ್ಯಾಪ್ಸಿಕಮ್ ತುಂಡುಗಳನ್ನು ಹರಡಿ. ನಂತರ ಕಾಳುಮೆಣಸಿನ ಪುಡಿ ಮತ್ತು ಚಿಲ್ಲಿ ಫ್ಲೇಕ್ಸ್ ಹಾಕಿ.
ಇದರ ಮೇಲೆ ಚೆನ್ನಾಗಿ ತುರಿಸಿದ ಚೀಸ್ ಹರಡಿ. ಬೇಕಾದರೆ ಸಣ್ಣಗೆ ಕತ್ತರಿಸಿದ ಕ್ಯಾರೆಟ್ ಸೇರಿಸಬಹುದು. ಈಗ ತವಾ ಅಥವಾ ಪ್ಯಾನ್ ಬಿಸಿ ಮಾಡಿ, ಸ್ವಲ್ಪ ತುಪ್ಪ ಸವರಿ. ಬ್ರೆಡ್ ಪಿಜ್ಜಾವನ್ನು ಅದರ ಮೇಲೆ ಇಟ್ಟು, ಕಡಿಮೆ ಉರಿಯಲ್ಲಿ ಚೀಸ್ ಕರಗುವವರೆಗೆ ಬೇಯಿಸಿ (ಸುಮಾರು 5–7 ನಿಮಿಷ). ಬಿಸಿ ಬಿಸಿ ಬ್ರೆಡ್ ಪಿಜ್ಜಾವನ್ನು ಸಾಸ್ ಅಥವಾ ಮಯೊನೀಸ್ ಜೊತೆಗೆ ಸವಿಯಿರಿ!

                                    