Snacks | ಚುಮು ಚುಮು ಚಳಿಗೆ ಬಿಸಿ ಬಿಸಿ ಆಲೂ ಭುಜಿಯ ಸೇವ್ ಅದ್ಭುತ ಕಾಂಬಿನೇಷನ್! ಟ್ರೈ ಮಾಡಿ

ಸಂಜೆ ಮಳೆ ಬೇರೆ ಬರ್ತಿದೆ, ಬರಿ ಕಾಫಿ ಕುಡಿಯೋಕೆ ಮನಸ್ಸೆ ಬರ್ತಿಲ್ಲ ಅಂದ್ರೆ ತುಂಬಾ ಬೇಗನೆ ರೆಡಿಯಾಗೋ ಈ ಆಲೂ ಭುಜಿಯ ಸೇವ್ ಟ್ರೈ ಮಾಡಿ. ಎಲ್ಲರಿಗೂ ಖಂಡಿತ ಇಷ್ಟವಾಗುತ್ತೆ.

ಬೇಕಾಗುವ ಸಾಮಗ್ರಿಗಳು:

ಬೇಯಿಸಿ ಹಿಸುಕಿದ ಆಲೂಗಡ್ಡೆ – 4 (ಮಧ್ಯಮ ಗಾತ್ರ)
ಕಡಲೆ ಹಿಟ್ಟು – 3 ಕಪ್
ಅಕ್ಕಿ ಹಿಟ್ಟು – 1/2 ಕಪ್
ಅರಿಶಿನ ಪುಡಿ – 3/4 ಟೀಸ್ಪೂನ್.
ಕೆಂಪು ಮೆಣಸಿನ ಪುಡಿ – 2 ಟೀಸ್ಪೂನ್.
ಚಾಟ್ ಮಸಾಲ – 1/2 ಟೀಸ್ಪೂನ್.
ಜೀರಿಗೆ – 1/4 ಟೀಸ್ಪೂನ್.
ನಿಂಬೆ ರಸ – 1/2 ನಿಂಬೆ
ಉಪ್ಪು – 1/4 ಟೀಸ್ಪೂನ್.
ರುಚಿಗೆ ತಕ್ಕಷ್ಟು ಉಪ್ಪು
ಡೀಪ್ ಫ್ರೈ ಮಾಡಲು ಎಣ್ಣೆ.

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ಹಿಸುಕಿದ ಆಲೂಗಡ್ಡೆ, ಅಕ್ಕಿ ಹಿಟ್ಟು, ಕಡಲೆ ಹಿಟ್ಟು,ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಚಾಟ್ ಮಸಾಲ, ಜೀರಿಗೆ, ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಆಲೂಗಡ್ಡೆ ಮತ್ತು ಇತರ ಮಸಾಲೆಗಳೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಈ ಹಿಟ್ಟನ್ನು 10-12 ನಿಮಿಷಗಳ ಕಾಲ ಹಾಗೆಯೇ ಬಿಡಿ.

ಈಗ ಚಕ್ಲಿ ಮೇಕರ್‌ನಲ್ಲಿ ಹಿಟ್ಟನ್ನು ತುಂಬಿಸಿ ಸಣ್ಣ ರಂಧ್ರಗಳಿರುವ ಅಚ್ಚನ್ನು ಬಳಸಿ ಕಾದ ಎಣ್ಣೆಯಲ್ಲಿ ನೇರವಾಗಿ ಒತ್ತಿ ಡೀಪ್ ಫ್ರೈ ಮಾಡಿದರೆ ಆಲೂ ಭುಜಿಯ ಸೇವ್ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!