ಸಂಜೆಯ ಹೊತ್ತಿಗೆ ಏನಾದರೂ ತಿನ್ನಬೇಕೆನ್ನುವ ಆಸೆ ಸಾಮಾನ್ಯ. ಚಹಾ ಜೊತೆಗೆ ಸ್ಪೈಸಿ ಹಾಗೂ ಗರಿಗರಿ ತಿಂಡಿ ಸಿಕ್ಕರೆ ಇನ್ನಷ್ಟು ಖುಷಿ. ಇಂತಹ ಸಂದರ್ಭಕ್ಕೆ ಪರ್ಫೆಕ್ಟ್ ಆಯ್ಕೆ ಎಂದರೆ ವೆಜ್ ಸ್ಯಾಂಡ್‌ವಿಚ್. ತ್ವರಿತವಾಗಿ ತಯಾರಿಸಬಹುದಾದ ಈ ರೆಸಿಪಿ ಹೊಟ್ಟೆ ತುಂಬಿಸುವುದರ ಜೊತೆಗೆ ರುಚಿಯಲ್ಲೂ ಹಿಂದೆ ಇಲ್ಲ.
8 ಬ್ರೆಡ್ ಸ್ಲೈಸ್‌ಗಳು
1/2 ಕ್ಯಾಪ್ಸಿಕಂ
1 ಸೌತೆಕಾಯಿ
1 ಕ್ಯಾರೆಟ್
1 ಆಲೂಗಡ್ಡೆ (ಬೇಯಿಸಿದ)
1 ಈರುಳ್ಳಿ
100 ಗ್ರಾಂ ಚೀಸ್
4 ಚೀಸ್ ಚೂರುಗಳು
4 ಟೀ ಚಮಚ ಮೇಯನೇಸ್
ಉಪ್ಪು (ರುಚಿಗೆ ತಕ್ಕಂತೆ)
1/4 ಟೀಸ್ಪೂನ್ ಕರಿಮೆಣಸು ಪುಡಿ
ಟೊಮೆಟೊ ಸಾಸ್
ಹಸಿರು ಮೆಣಸಿನಕಾಯಿ ಸಾಸ್
ಮಾಡುವ ವಿಧಾನ:
ಮೊದಲು ಸೌತೆಕಾಯಿ, ಈರುಳ್ಳಿ, ಕ್ಯಾಪ್ಸಿಕಂ ಚೆನ್ನಾಗಿ ಚಿಕ್ಕಚಿಕ್ಕವಾಗಿ ಕತ್ತರಿಸಬೇಕು. ಕ್ಯಾರೆಟ್ ಅನ್ನು ತುರಿಯಬೇಕು. ಬೇಯಿಸಿದ ಆಲೂಗಡ್ಡೆ ಮ್ಯಾಶ್ ಮಾಡಿ. ಈ ಎಲ್ಲಾ ತರಕಾರಿ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ, ತುರಿದ ಚೀಸ್ ಹಾಗೂ ಮೇಯನೇಸ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಇದಾದಮೇಲೆ ಬ್ರೆಡ್ ಸ್ಲೈಸ್‌ಗಳ ಮೇಲೆ ಟೊಮೆಟೊ ಸಾಸ್ ಅಥವಾ ಹಸಿರು ಸಾಸ್ ಹರಡಿ ನಂತರ ತಯಾರಿಸಿದ ಮಿಶ್ರಣವನ್ನು ಅದರ ಮೇಲೆ ಹಾಕಿ ಮತ್ತೊಂದು ಬ್ರೆಡ್ ಸ್ಲೈಸ್ ಇಟ್ಟು ಕ್ಲೋಸ್ ಮಾಡಿ. ಈಗ ಪ್ಯಾನ್ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಹಾಕಿ, ಕಡಿಮೆ ಉರಿಯಲ್ಲಿ ಎರಡೂ ಬದಿಗಳನ್ನು ಗರಿಗರಿಯಾಗಿ ಬೇಯಿಸಿ. ಗೋಲ್ಡನ್ ಬ್ರೌನ್ ಆಗಿದ್ರೆ ವೆಜ್ ಸ್ಯಾಂಡ್‌ವಿಚ್ ರೆಡಿ!