ನೀವು ಬಿಸಿ ತಿಂಡಿಯನ್ನು ತಿನ್ನಲು ಹಂಬಲಿಸುತ್ತಿದ್ದರೆ, ಡ್ರೈಪುಟ್ಸ್ ಕಚೋರಿಯನ್ನು ಪ್ರಯತ್ನಿಸಿ. ಇದನ್ನು ಹೇಗೆ ಮಾಡಬೇಕೆಂದು ನೋಡಿ.
ಬೇಕಾಗುವ ಸಾಮಾಗ್ರಿಗಳು
ಮೈದಾ ಹಿಟ್ಟು- ಕಪ್
ಚಿರೋಟಿ ರವೆ – 1 ಕಪ್
ಉಪ್ಪು- 1 ಚಿಟಿಕೆ
ಗೋಡಂಬಿ – 10
ಬಾದಾಮಿ – 8
ಪಿಸ್ತಾ – 8
ದ್ರಾಕ್ಷಿ – 10
ಗಸಗಸೆ ಪುಡಿ – 3 ಚಮಚ
ಸೋಂಪು ಕಾಳು – 3 ಚಮಚ
ಒಣ ಕೊಬ್ಬರಿ ತುರಿ – ಅರ್ಧ ಕಪ್
ಸಕ್ಕರೆ ಪುಡಿ – 1 ಕಪ್
ಎಳ್ಳಿನ ಪುಡಿ – 3 ಚಮಚ
ಏಲಕ್ಕಿ ಪುಡಿ – ಅರ್ಧ ಚಮಚ
ಹುರಿಗಡಲೆ ಪುಡಿ – ಅರ್ಧ ಕಪ್
ಮಾಡುವ ವಿಧಾನ
ಮೈದಾ ಹಿಟ್ಟಿಗೆ ಉಪ್ಪು, ರವೆ ಹಿಟ್ಟು ಮತ್ತು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ 30 ನಿಮಿಷ ನೆನೆಯಲು ಬಿಡಿ.
ಗೋಡಂಬಿ, ಬಾದಾಮಿ, ಪಿಸ್ತಾ ಮತ್ತು ಸೋಂಪು ಸೇರಿಸಿ ರುಬ್ಬಿಕೊಳ್ಳಿ.
ಬೆಚ್ಚಗಿನ ಹಿಟ್ಟಿಗೆ ದ್ರಾಕ್ಷಿ, ಗಸಗಸೆ ಪುಡಿ, ತೆಂಗಿನ ತುರಿ, ಸಕ್ಕರೆ ಪುಡಿ, ಎಳ್ಳಿನ ಪುಡಿ ಮತ್ತು ಏಲಕ್ಕಿ ಪುಡಿ ಸೇರಿಸಿ ಹೂರಣ ತಯಾರಿಸಿ.
ಗೋಡಂಬಿ ಮತ್ತು ಬಾದಾಮಿ ಮಿಶ್ರಣ ಮಾಡಿ. ಹಿಟ್ಟಿನ ಮಿಶ್ರಣವನ್ನು ಬಟ್ಟಲಾಕಾರದಲ್ಲಿ ತಟ್ಟಿ ಎರಡು ಚಮಚದಷ್ಟು ಹೂರಣ ತುಂಬಿಸಿ ಅಂಚುಗಳನ್ನು ಅಂಟಿಸಿ ಮೆಲುವಾಗಿ ಲಟ್ಟಿಸಿ. ಕಾದ ಎಣ್ಣೆಯಲ್ಲಿ ಕರೆದರೆ ಡ್ರೈಫ್ರುಟ್ಸ್ ಕಚೋರಿ ತಿನ್ನಲು ಸಿದ್ಧ.