Friday, November 21, 2025

Snacks | ಬಾಯಲ್ಲಿ ನೀರು ತರಿಸೋ ದಹಿ ಪುರಿ: ಏನ್ ರುಚಿ, ಆಹಾ!

ಚಾಟ್ ಪ್ರಿಯರಿಗೆ ದಹಿ ಪುರಿ ಎಂದರೆ ಬಾಯಲ್ಲಿ ನೀರು ಬರೋದು ಖಂಡಿತ! ಖಾರ–ಸಿಹಿ–ಹುಳಿ ರುಚಿಗಳ ಮಿಶ್ರಣದಿಂದ ಈ ತಿಂಡಿ ಎಲ್ಲರ ಅಚ್ಚುಮೆಚ್ಚು. ಮನೆಯಲ್ಲೇ ಸುಲಭವಾಗಿ, ರುಚಿಕರವಾಗಿ ತಯಾರಿಸಬಹುದು. ಸ್ನ್ಯಾಕ್ಸ್ ಟೈಂಗೆ ಸ್ಪೆಷಲ್ ಆಗಿ ದಹಿ ಪುರಿ ಪ್ಲೇಟ್ ರೆಡಿ ಮಾಡೋಣ.

ಬೇಕಾಗುವ ಸಾಮಗ್ರಿಗಳು:

ಪುರಿ – 12
ಬೇಯಿಸಿದ ಆಲೂಗಡ್ಡೆ – 2 (ಮ್ಯಾಶ್ ಮಾಡಿದ್ದು)
ಸಿಹಿ ಖರ್ಜೂರ–ಬೆಲ್ಲ ಚಟ್ನಿ – 3 ಟೇಬಲ್ ಸ್ಪೂನ್
ಪುಡಿ ಮೆಣಸಿನ ಪುಡಿ – ½ ಟೀಸ್ಪೂನ್
ಹಸಿಮೆಣಸು–ಕೊತ್ತಂಬರಿ ಚಟ್ನಿ – 2 ಟೇಬಲ್ ಸ್ಪೂನ್
ಮೊಸರು – 1 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಸೇವ್ – ½ ಕಪ್
ಕೊತ್ತಂಬರಿ – ಸ್ವಲ್ಪ (ಸಣ್ಣದಾಗಿ ಕತ್ತರಿಸಿದದ್ದು)
ಚಾಟ್ ಮಸಾಲಾ – ½ ಟೀಸ್ಪೂನ್

ತಯಾರಿಸುವ ವಿಧಾನ:

ಪುರಿ ಮಧ್ಯದಲ್ಲಿ ಸಣ್ಣ ತೂತು ಮಾಡಿ. ಪ್ರತಿಯೊಂದು ಪೂರಿಯಲ್ಲೂ ಮ್ಯಾಶ್ ಮಾಡಿದ ಆಲೂಗಡ್ಡೆ ಸ್ವಲ್ಪ ತುಂಬಿ. ನಂತರ ಹಸಿಮೆಣಸು ಚಟ್ನಿ ಮತ್ತು ಸಿಹಿ ಚಟ್ನಿ ತಲಾ ಒಂದು ಸ್ಪೂನ್ ಹಾಕಿ, ಬಿಟ್ ಮಾಡಿದ ತಂಪಾದ ಮೊಸರು ಮೇಲಿಂದ ಹಾಕಿ. ಚಾಟ್ ಮಸಾಲಾ, ಪುಡಿ ಮೆಣಸಿನ ಪುಡಿ, ಉಪ್ಪು ಸ್ವಲ್ಪ ಉದುರಿಸಿ. ಮೇಲೆ ಸೇವ್ ಹಾಕಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

error: Content is protected !!