ಸಂಜೆಯ ಟೀ ಸಮಯಕ್ಕೆ ಅಥವಾ ಪಾರ್ಟಿ ಸ್ನ್ಯಾಕ್ ಆಗಿ ಏನಾದರೂ ವಿಭಿನ್ನವಾಗಿ, ಕ್ರಿಸ್ಪಿಯಾಗಿ ತಯಾರಿಸಬೇಕು ಅಂದ್ರೆ ಪೆರಿ ಪೆರಿ ಪೋಟೇಟೋ ಚೀಸ್ ಬಾಲ್ ಮಾಡಿ ನೋಡಿ. ಹೊರಗೆ ಕ್ರಿಸ್ಪಿ, ಒಳಗೆ ಸಾಫ್ಟ್ ಆಲೂಗಡ್ಡೆ ಮತ್ತು ಚೀಸ್ ಜೊತೆಗೆ ಪೆರಿ ಪೆರಿ ಮಸಾಲೆಯ ರುಚಿ ಈ ಸ್ನ್ಯಾಕ್‌ಗೆ ವಿಶೇಷ ಆಕರ್ಷಣೆ ಕೊಡುತ್ತದೆ. ಮಕ್ಕಳಿಗಂತೂ ಇದು ತುಂಬಾನೇ ಇಷ್ಟ ಆಗುತ್ತೆ. ಟ್ರೈ ಮಾಡಿ
ಬೇಕಾಗುವ ಸಾಮಗ್ರಿಗಳು:
ಬೇಯಿಸಿದ ಆಲೂಗಡ್ಡೆ – 3
ಚೀಸ್ – ½ ಕಪ್
ಪೆರಿ ಪೆರಿ ಮಸಾಲಾ – 1½ ಟೀ ಸ್ಪೂನ್
ಕಾರ್ನ್ ಫ್ಲೋರ್ – 2 ಟೇಬಲ್ ಸ್ಪೂನ್
ಬ್ರೆಡ್ ಕ್ರಂಬ್ಸ್ – ½ ಕಪ್
ಉಪ್ಪು – ರುಚಿಗೆ ತಕ್ಕಂತೆ
ಮೆಣಸಿನ ಪುಡಿ – ½ ಟೀ ಸ್ಪೂನ್
ಎಣ್ಣೆ – ಫ್ರೈ ಮಾಡಲು
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಬೇಯಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ಮ್ಯಾಶ್ ಮಾಡಿ. ಅದಕ್ಕೆ ಚೀಸ್, ಪೆರಿ ಪೆರಿ ಮಸಾಲಾ, ಉಪ್ಪು ಮತ್ತು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಈಗ ಈ ಮಿಶ್ರಣದಿಂದ ಸಣ್ಣ ಬಾಲ್‌ಗಳಾಗಿ ಮಾಡಿ. ಪ್ರತಿ ಬಾಲ್‌ನ್ನು ಮೊದಲು ಕಾರ್ನ್ ಫ್ಲೋರ್‌ನಲ್ಲಿ ಅದ್ದಿ, ನಂತರ ಬ್ರೆಡ್ ಕ್ರಂಬ್ಸ್‌ನಲ್ಲಿ ಉರುಳಿಸಿ. ಕಾದ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಬಂಗಾರದ ಬಣ್ಣ ಬರುವವರೆಗೆ ಫ್ರೈ ಮಾಡಿ.

