ಮನೆಮಂದಿಯೆಲ್ಲ ಸೇರಿ ಸಂಜೆ ಚಹಾ ಸಮಯದಲ್ಲಿ ಬಿಸಿಬಿಸಿ ತಿಂಡಿ ಸವಿಬೇಕು ಅಂದ್ರೆ ಫಟಾ ಫಟ್ ಅಂತ ರೆಡಿ ಆಗೋದು ಅಂದ್ರೆ ಅದು ಬಟಾಣಿ ಪಡ್ಡು. ಕಡಿಮೆ ಎಣ್ಣೆಯಲ್ಲಿ ತಯಾರಿಸಬಹುದಾದ ಈ ರೆಸಿಪಿ ಆರೋಗ್ಯಕರವಾಗಿಯೂ ಇರುತ್ತದೆ. ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಮೆಚ್ಚಿನ ಈ ಬಟಾಣಿ ಪಡ್ಡುಗಳು ಚಟ್ನಿ ಅಥವಾ ಟೊಮ್ಯಾಟೋ ಸಾಸ್ ಜೊತೆಗೆ ಇನ್ನಷ್ಟು ರುಚಿಯಾಗುತ್ತವೆ.
ಬೇಕಾಗುವ ಪದಾರ್ಥಗಳು:
ಹಸಿರು ಬಟಾಣಿ – 1 ಕಪ್
ಸೂಜಿ (ರವೆ) – 1 ಕಪ್
ಮೊಸರು – ½ ಕಪ್
ಈರುಳ್ಳಿ – 1
ಹಸಿಮೆಣಸು – 2
ಇಂಗು – ಸ್ವಲ್ಪ
ಜೀರಿಗೆ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಇನೋ ಅಥವಾ ಬೇಕಿಂಗ್ ಸೋಡಾ – ಚಿಟಿಕೆ
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ತಯಾರಿಸುವ ವಿಧಾನ:
ಹಸಿರು ಬಟಾಣಿಯನ್ನು ಸ್ವಲ್ಪ ಬೇಯಿಸಿ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ಒಂದು ಬಟ್ಟಲಿನಲ್ಲಿ ಸೂಜಿ, ಮೊಸರು, ಬಟಾಣಿ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಈರುಳ್ಳಿ, ಹಸಿಮೆಣಸು, ಇಂಗು, ಜೀರಿಗೆ ಮತ್ತು ಉಪ್ಪು ಸೇರಿಸಿ ಕಲಸಿ. ಕೊನೆಗೆ ಇನೋ ಸೇರಿಸಿ ಹಗುರವಾಗಿ ಮಿಶ್ರಣ ಮಾಡಿ. ಪಡ್ಡು ತವವನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಾಕಿ ಮಿಶ್ರಣವನ್ನು ಹಾಕಿ ಮುಚ್ಚಳ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ. ಎರಡೂ ಕಡೆ ಚಿನ್ನದ ಬಣ್ಣ ಬರುವವರೆಗೆ ತಿರುಗಿಸಿ ಬೇಯಿಸಿದರೆ ರುಚಿಕರ ಬಟಾಣಿ ಪಡ್ಡು ಸಿದ್ಧ.
ಇದನ್ನೂ ಓದಿ:

