Tuesday, December 30, 2025

Snacks Series 24 | ಈ ಸೋಯಾ ಚಿಲ್ಲಿ ಒಮ್ಮೆ ತಿಂದ್ರೆ ಚಿಕನ್ ಕೂಡ ಮರೆತು ಬಿಡ್ತೀರಾ ನೋಡಿ!

ಹೋಟೆಲ್ ಸ್ಟೈಲ್ ಇಂಡೋ-ಚೈನೀಸ್ ರುಚಿ ಮನೆಲ್ಲೇ ಬೇಕಾ? ಹಾಗಿದ್ರೆ ಸೋಯಾ ಚಿಲ್ಲಿ ಪರ್ಫೆಕ್ಟ್ ಆಯ್ಕೆ. ಪ್ರೋಟೀನ್ ತುಂಬಿರುವ ಸೋಯಾ ಚಂಕ್ಸ್ ಬಳಸಿ ತಯಾರಿಸುವ ಈ ಡಿಶ್ ಆರೋಗ್ಯಕರವೂ ಹೌದು, ರುಚಿಕರವೂ ಹೌದು.

ಬೇಕಾಗುವ ಪದಾರ್ಥಗಳು

ಸೋಯಾ ಚಂಕ್ಸ್ – 1 ಕಪ್
Corn flour – 2 ಟೇಬಲ್ ಸ್ಪೂನ್
ಮೈದಾ – 1 ಟೇಬಲ್ ಸ್ಪೂನ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಫ್ರೈ ಮಾಡಲು
ಎಣ್ಣೆ – 1 ಟೇಬಲ್ ಸ್ಪೂನ್
ಸಣ್ಣಗೆ ಕತ್ತರಿಸಿದ ಈರುಳ್ಳಿ – 1
ಕ್ಯಾಪ್ಸಿಕಂ – 1
ಹಸಿಮೆಣಸು – 1–2
ಸೋಯಾ ಸಾಸ್ – 1 ಟೇಬಲ್ ಸ್ಪೂನ್
ಚಿಲ್ಲಿ ಸಾಸ್ – 1 ಟೇಬಲ್ ಸ್ಪೂನ್
ಟೊಮೆಟೊ ಕೆಚಪ್ – 1 ಟೇಬಲ್ ಸ್ಪೂನ್
ವಿನೇಗರ್ – 1 ಟೀ ಸ್ಪೂನ್
ಕಪ್ಪು ಮೆಣಸು ಪುಡಿ – ½ ಟೀ ಸ್ಪೂನ್
ಸ್ಪ್ರಿಂಗ್ ಆನಿಯನ್ – ಅಲಂಕಾರಕ್ಕೆ

ತಯಾರಿಸುವ ವಿಧಾನ

ಮೊದಲು ಸೋಯಾ ಚಂಕ್ಸ್ ಅನ್ನು ಬಿಸಿ ನೀರಿನಲ್ಲಿ 5–7 ನಿಮಿಷ ನೆನೆಸಿ. ನಂತರ ನೀರನ್ನು ಚೆನ್ನಾಗಿ ಹಿಂಡಿ ತೆಗೆದು ಉಪ್ಪು ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಇದಕ್ಕೆ ಕಾರ್ನ್ ಫ್ಲೋರ್ ಮತ್ತು ಮೈದಾ ಹಾಕಿ ಮಿಶ್ರಣ ಮಾಡಿ. ಕಾದ ಎಣ್ಣೆಯಲ್ಲಿ ಚಂಕ್ಸ್‌ಗಳನ್ನು ಗೋಲ್ಡನ್ ಕಲರ್ ಬರುವವರೆಗೆ ಡೀಪ್ ಫ್ರೈ ಮಾಡಿ.

ಇನ್ನು ಒಂದು ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ, ಈರುಳ್ಳಿ, ಹಸಿಮೆಣಸು, ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿ. ನಂತರ ಸೋಯಾ ಸಾಸ್, ಚಿಲ್ಲಿ ಸಾಸ್, ಕೆಚಪ್ ಮತ್ತು ವಿನೇಗರ್ ಸೇರಿಸಿ. ಸ್ವಲ್ಪ ನೀರು ಹಾಕಿ ಸಾಸ್ ಗಟ್ಟಿಯಾಗುವವರೆಗೆ ಕುದಿಸಿ. ಈಗ ಫ್ರೈ ಮಾಡಿದ ಸೋಯಾ ಚಂಕ್ಸ್ ಸೇರಿಸಿ ಚೆನ್ನಾಗಿ ತಿರುಗಿಸಿ. ಕೊನೆಯಲ್ಲಿ ಕಪ್ಪು ಮೆಣಸು ಪುಡಿ ಹಾಗೂ ಸ್ಪ್ರಿಂಗ್ ಆನಿಯನ್ ಹಾಕಿ ಮಿಕ್ಸ್ ಮಾಡಿ.

error: Content is protected !!