Snake Bites | ಹಾವು ಕಚ್ಚಿದ ತಕ್ಷಣ ದೇಹದಲ್ಲಿ ಈ ರೀತಿಯ ಬದಲಾವಣೆಗಳಾಗುತ್ತವೆ! ಎಚ್ಚರ…

ಗ್ರಾಮೀಣ ಹಾಗೂ ಅರಣ್ಯ ಪ್ರದೇಶಗಳಲ್ಲಿ ಹಾವು ಕಡಿತ (Snake Bite) ಪ್ರಕರಣಗಳು ಸಾಮಾನ್ಯ. ನಗರ ಪ್ರದೇಶದಲ್ಲಿಯೂ ಕೆಲವೊಮ್ಮೆ ಇಂತಹ ಘಟನೆಗಳು ನಡೆಯುತ್ತವೆ. ಆದರೆ, ಹಾವು ಕಡಿತವಾದ ನಂತರ ದೇಹದಲ್ಲಿ ಎಂತಹ ಬದಲಾವಣೆಗಳು ಸಂಭವಿಸುತ್ತವೆ ಎಂಬ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇರುವುದಿಲ್ಲ.

ವಿಷ ದೇಹದ ಮೇಲೆ ಬೀರುವ ಪರಿಣಾಮ
ವಿಷಭರಿತ ಹಾವುಗಳು—ವಿಶೇಷವಾಗಿ ಕೋಬ್ರಾ ಹಾವುಗಳು—ಮೊದಲು ನರಮಂಡಲದ ಮೇಲೆ ಪರಿಣಾಮ ಬೀರುತ್ತವೆ. ನಂತರ ಅದು ಸ್ನಾಯು ದೌರ್ಬಲ್ಯ, ಉಸಿರಾಟದ ತೊಂದರೆ, ಅಸ್ಥಿರ ನಡಿಗೆ, ಕಣ್ಣು ಬಡಿಯಲು ಸಾಧ್ಯವಾಗದಂತಹ ಸ್ಥಿತಿ, ಮಸುಕಾದ ದೃಷ್ಟಿ ಮೊದಲಾದ ಲಕ್ಷಣಗಳನ್ನು ತರುತ್ತದೆ. ವಿಷವು ನರಗಳು ಮತ್ತು ಸ್ನಾಯುಗಳ ನಡುವಿನ ಸಂಪರ್ಕ ವ್ಯವಸ್ಥೆ (signal transmission) ಅಡ್ಡಿಪಡಿಸುತ್ತದೆ.

ರಕ್ತಸ್ರಾವ ಮತ್ತು ಅಂಗಾಂಗ ವೈಫಲ್ಯಕ್ಕೂ ಕಾರಣ
ಸ್ಕೇಲ್ಡ್ ವೈಪರ್, ರಸೆಲ್ ವೈಪರ್ ಹಾವುಗಳಲ್ಲಿ ಕಂಡುಬರುವ ಹೆಮೋಟಾಕ್ಸಿಕ್ ವಿಷವು ರಕ್ತ ಹೆಪ್ಪುಗಟ್ಟಲು ತೊಂದರೆ ಉಂಟುಮಾಡಿ ಆಂತರಿಕ ಮತ್ತು ಬಾಹ್ಯ ರಕ್ತಸ್ರಾವ, ಕಡಿಮೆ ರಕ್ತದೊತ್ತಡ, ಹೃದಯ ಬಡಿತದಲ್ಲಿ ಏರಿಳಿತ, ಮೂತ್ರಪಿಂಡ ಹಾನಿ, ಕೆಲವು ಸಂದರ್ಭಗಳಲ್ಲಿ ಬಹು ಅಂಗಾಂಗ ವೈಫಲ್ಯಕ್ಕೂ ಕಾರಣವಾಗಬಹುದು. ಸಮುದ್ರ ಹಾವುಗಳ ಮಯೋಟಾಕ್ಸಿನ್ ವಿಷವು ಸ್ನಾಯುಗಳನ್ನು ನಾಶಮಾಡಿ ತೀವ್ರ ನೋವಿಗೆ ಕಾರಣವಾಗುತ್ತದೆ.

ಸಾವು ತಕ್ಷಣವಾಗುವುದಿಲ್ಲ
ತಜ್ಞರ ಪ್ರಕಾರ, ಹಾವು ಕಚ್ಚಿದ ತಕ್ಷಣ ಮನುಷ್ಯ ಸಾಯುವುದಿಲ್ಲ. ವಿಷದ ಪರಿಣಾಮಗಳು ಕ್ರಮೇಣ ಹೆಚ್ಚಾಗುತ್ತವೆ. ಈ ನಡುವಿನ ಸಮಯವೇ ಅತ್ಯಂತ ನಿರ್ಣಾಯಕ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಕ್ಕರೆ, ಜೀವ ಉಳಿಸುವ ಸಾಧ್ಯತೆ ಇದೆ. ಆದರೆ ವಿಳಂಬವಾದರೆ ಅಥವಾ ಅಸಮರ್ಪಕ ಡೋಸೇಜ್ ನೀಡಿದರೆ ಮರಣ ಸಂಭವಿಸಬಹುದು.

ಹಾವು ಕಚ್ಚಿದ ವ್ಯಕ್ತಿಗೆ ತಕ್ಷಣವೇ ಈ ಕ್ರಮಗಳನ್ನು ತೆಗೆದುಕೊಳ್ಳಬೇಕು:

ಹಾವು ಇದ್ದಲ್ಲಿ ಅದರಿಂದ ಆ ವ್ಯಕ್ತಿಯನ್ನು ಸುರಕ್ಷಿತವಾಗಿ ದೂರಗೊಳಿಸಿ

ಗಾಬರಿಯಾದ ಪರಿಸ್ಥಿತಿ ತಪ್ಪಿಸಿ, ಆ ವ್ಯಕ್ತಿಯನ್ನು ಶಾಂತಗೊಳಿಸಿ

ಕಚ್ಚಿದ ಭಾಗಕ್ಕೆ ಬಟ್ಟೆ ಅಥವಾ ಬೆಲ್ಟ್‌ನಿಂದ ಬಿಗಿಯಾಗಿ ಕಟ್ಟಿ, ವಿಷ ಹರಡುವಿಕೆ ತಡೆಗಟ್ಟಬೇಕು

ವ್ಯಕ್ತಿಯನ್ನು ನಡೆದಾಡಲು ಬಿಡದೇ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು

ತ್ವರಿತವಾಗಿ ಆಂಟಿವೆನಂ ಚಿಕಿತ್ಸೆ ದೊರೆತರೆ ಜೀವ ಉಳಿಸಬಹುದು

ಭಾರತದಲ್ಲಿ ಪ್ರತಿ ವರ್ಷ ಸಾವಿರಾರು ಜನರು ಹಾವು ಕಡಿತದಿಂದ ಸಾವನ್ನಪ್ಪುತ್ತಿದ್ದಾರೆ. ಈ ಸಾವುಗಳನ್ನು ತಡೆಯಲು ಅವಶ್ಯಕವಾಗಿರುವುದು ಜಾಗೃತಿ, ಸರಿಯಾದ ಪ್ರಥಮ ಚಿಕಿತ್ಸೆ ಮತ್ತು ತಕ್ಷಣ ವೈದ್ಯಕೀಯ ನೆರವು. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಸಮಸ್ಯೆಗಾಗಿ ತಜ್ಞರನ್ನು ಸಂಪರ್ಕಿಸಿ.)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!