ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತದಲ್ಲಿ ಮಳೆ, ಹಿಮದ ಆರ್ಭಟ ಶುರುವಾಗಿದ್ದು, ಉತ್ತರಾಖಂಡ್‌ನ ಬದರಿನಾಥ ದೇಗುಲದ 3 ಕಿ.ಮೀ. ಸಮೀಪದಲ್ಲಿ ಭಾರೀ ಹಿಮಸ್ಫೋಟವಾಗಿದೆ.
ಹಿಮಸ್ಫೋಟದಿಂದ ಕಾಮಗಾರಿ ನಡೆಸುತ್ತಿದ್ದ 57ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿದ್ದು ಇಲ್ಲಿಯವರೆಗೆ 32 ಕಾರ್ಮಿಕರನ್ನು ರಕ್ಷಿಸಲಾಗಿದೆ.
ಹಿಮದಡಿ ಸಿಲುಕಿರುವ 25 ಕಾರ್ಮಿಕರಿಗಾಗಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಐಟಿಪಿಬಿ, ಬಿಆರ್‌ಓ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಮೂಲಕ ಮಾಹಿತಿ ಪಡೆದಿದ್ದಾರೆ.