ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತವಾಗಿದ್ದು, 1,250ಕ್ಕೂ ಹೆಚ್ಚು ರಸ್ತೆಗಳು ಬಂದ್ ಆಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕೋಪಯೋಗಿ ಇಲಾಖೆ ಸಚಿವ ವಿಕ್ರಮಾದಿತ್ಯ ಸಿಂಗ್ ಮಾತನಾಡಿ, ‘ಹಿಮಾಚಲ ಪ್ರದೇಶದ ವಿವಿಧ ಭಾಗಗಳಲ್ಲಿ ಸ್ನೋ ಬ್ಲೋಯರ್‌ಗಳು ಮತ್ತು ಜೆಸಿಬಿ ಯಂತ್ರಗಳ ಮೂಲಕ ಹಿಮ ತೆರವು ಮಾಡಲಾಗುತ್ತಿದ್ದು, ರಸ್ತೆಗಳನ್ನು ಮತ್ತೆ ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಮುಕ್ತವಾಗಿಸಲು ಸರ್ಕಾರ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆʼ ಎಂದರು.
ಪ್ರವಾಸೋದ್ಯಮ ರಾಜ್ಯದ ಆದಾಯದ ಪ್ರಮುಖ ಮೂಲ ಎಂದ ಸಚಿವರು, ಪ್ರವಾಸಿಗರು ಬರುತ್ತಿರುವುದು ಉತ್ತಮ. ಇದು ನಮ್ಮ ಆರ್ಥಿಕತೆಯನ್ನು ಬಲಪಡಿಸುತ್ತದೆ. ಹಿಮಾಚಲವು ದೇವಭೂಮಿ. ‘ಅತಿಥಿ ದೇವೋ ಭವ’ ತತ್ತ್ವವನ್ನು ನಂಬಿದ್ದೇವೆ. ಆದರೆ ಪ್ರವಾಸಿಗರು ಜವಾಬ್ದಾರಿಯುತವಾಗಿ ಪ್ರಯಾಣಿಸಬೇಕು ಮತ್ತು ರಾಜ್ಯದ ಸಂಸ್ಕೃತಿ, ಪರಂಪರೆ ಅಥವಾ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಯಾವುದೇ ಚಟುವಟಿಕೆಯಲ್ಲಿ ತೊಡಗಬಾರದು ಎಂದು ಅವರು ಹೇಳಿದ್ದಾರೆ.
ರಸ್ತೆ ಬಂದ್, ಸಂಚಾರ ದಟ್ಟಣೆ ಮತ್ತು ಹವಾಮಾನದ ಎಚ್ಚರಿಕೆಗಳ ನಡುವೆಯೂ ಪ್ರವಾಸಿಗರು ಹಿಮಪಾತವನ್ನು ಆನಂದಿಸುತ್ತಿದ್ದಾರೆ.



